ಹೊದಿಕೆ ಶುಚಿಗೊಳಿಸಲು ಮೆಕಾನೈಸ್ಡ್ ಲಾಂಡ್ರಿ

NEW LANDRI
Published on

ಹುಬ್ಬಳ್ಳಿ : ರೈಲ್ವೆಯ ಮೊದಲ, ದ್ವಿತೀಯ ಹಾಗೂ ತೃತೀಯ ದರ್ಜೆ ಎಸಿ ಬೋಗಿಗಳ ಪ್ರಯಾಣಿಕರಿಗೆ ನೀಡುವ ಬ್ಲಾಂಕೆಟ್ ಸೇರಿದಂತೆ ಇತರ ಬೆಡ್​ಲೈನ್ ಸೆಟ್​ಗಳನ್ನು ಶುಚಿಗೊಳಿಸಲು ನೈಋತ್ಯ ರೈಲ್ವೆ ವಲಯದ ಮೂರೂ ವಿಭಾಗಗಳಲ್ಲಿ ಪ್ರತ್ಯೇಕ ಮೆಕಾನೈಸ್್ಡ ಲಾಂಡ್ರಿಗಳು ಇವೆ ಎಂದು ನೈಋತ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಧಾ ರಾಣಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹುಬ್ಬಳ್ಳಿ ಹಾಗೂ ಮೈಸೂರು ರೈಲ್ವೆ ವಿಭಾಗದಲ್ಲಿ ತಲಾ 3.5 ಟನ್ ಮತ್ತು ಬೆಂಗಳೂರು ರೈಲ್ವೆ ವಿಭಾಗದಲ್ಲಿ 10 ಟನ್ ಸಾಮರ್ಥ್ಯದ ಮೆಕಾನೈಸ್ಡ್ ಲಾಂಡ್ರಿಗಳು ಇವೆ ಎಂದರು.

ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ ನಿತ್ಯ 7 ಸಾವಿರ ಬೆಡ್​ಶೀಟ್, ತಲೆದಿಂಬಿನ 3,500 ಕವರ್​ಗಳು, 100 ವುಲನ್ ಬ್ಲಾಂಕೆಟ್​ಗಳು ಹಾಗೂ 3,500 ಕೈ ವಸ್ತ್ರಗಳನ್ನು ತೊಳೆಯಲಾಗುತ್ತದೆ ಎಂದು ತಿಳಿಸಿದರು.

2018ರ ಮೊದಲು 2 ತಿಂಗಳಿಗೆ ಒಂದು ಬಾರಿ ಬ್ಲಾಂಕೆಟ್ ತೊಳೆಯುವ ನಿಯಮ ಇತ್ತು. ಆದರೆ, 2018ರ ನಂತರ 15 ದಿನಗಳಿಗೊಮ್ಮೆ ಒಂದು ಬಾರಿ ಬ್ಲಾಂಕೆಟ್ ತೊಳೆಯಬೇಕು. ಚಳಿಗಾಲ ಅಥವಾ ಬ್ಲಾಂಕೆಟ್​ನ ಸಮರ್ಪಕ ಪೂರೈಕೆ ಇರದಿದ್ದರೆ ಪ್ರತಿ ತಿಂಗಳಿಗೆ ಒಂದು ಬಾರಿಯಾದರೂ ತೊಳೆಯಲೇಬೇಕು ಎಂಬ ನಿಯಮ ಜಾರಿಗೊಳಿಸಲಾಗಿದೆ ಎಂದರು.

ಬ್ಲಾಂಕೆಟ್, ಬೆಡ್​ಶೀಟ್, ತಲೆದಿಂಬು, ತಲೆದಿಂಬಿನ ಕವರ್, ಕೈ ವಸ್ತ್ರಗಳನ್ನು ಪ್ರಯಾಣಿಕರಿಗೆ ಶೀಲ್ಡ್ ಕವರ್​ನಲ್ಲಿ ನೀಡಲಾಗುತ್ತದೆ. ಬ್ಲಾಂಕೆಟ್ ಹೊರತುಪಡಿಸಿ ಇನ್ನುಳಿದ ಸಲಕರಣೆಗಳನ್ನು ನಿತ್ಯ ತೊಳೆಯಲಾಗುತ್ತದೆ. ಈ ಮೊದಲು ಪ್ರತಿ ಬ್ಲಾಂಕೆಟ್ ಅನ್ನು 4 ವರ್ಷಕ್ಕೆ ಒಮ್ಮೆ ಬದಲಾಯಿಸಲಾಗುತ್ತಿತ್ತು. ಇದೀಗ, ಪ್ರತಿ 2 ವರ್ಷಕ್ಕೊಮ್ಮೆ ಬ್ಲಾಂಕೆಟ್ ಬದಲಾಯಿಸಲಾಗುತ್ತದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net