ಆವತಿಯಲ್ಲಿ ದೃಶ್ಯ ರೂಪಕ ಗಣೇಶೋತ್ಸವ

Mechanical monocular visual metaphor
Mechanical monocular visual metaphor devnalli
Published on

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಕಸಬಾ ಹೋಬಳಿಯ ಆವತಿಯಲ್ಲಿ ಶ್ರೀ ವಿದ್ಯಾಗಣಪತಿ ಗೆಳೆಯರ ಕ್ರೀಡಾ ಮತ್ತು ಕಲಾಸಂಘ ಈ ಬಾರಿ ವಿಶೇಷ ರೀತಿಯಲ್ಲಿ ಗಣೇಶೋತ್ಸವ ಹಮ್ಮಿಕೊಂಡಿದ್ದು, ಯಂತ್ರಚಾಲಿತ ಏಕದಂತ ದೃಶ್ಯ ರೂಪಕ ಏರ್ಪಡಿಸಿದೆ.
ಸಂಘವು ಪ್ರತಿ ವರ್ಷ ತುಮಕೂರಿನಲ್ಲಿ ಆಯೋಜಿಸುವಂತೆ ಗಣೇಶನ ಯಂತ್ರ ಚಾಲಿತ ವಿಶೇಷ ದೃಶ್ಯ ರೂಪಕ ಅಳವಡಿಸಿಕೊಂಡು ಬರುತ್ತಿತ್ತು. ಈ ಬಾರಿ 61ನೇ ವಿಶೇಷವಾಗಿ ಏಕದಂತ ಎಂಬ ಯಂತ್ರ ಚಾಲಿತ ದೃಶ್ಯ ರೂಪಕ ಹಮ್ಮಿಕೊಂಡಿದ್ದು, 30 ದಿನ ಪ್ರತಿ ದಿನ ಸಂಜೆ 8 ಗಂಟೆಗೆ ಸಾರ್ವಜನಿಕರಿಗೆ ರೂಪಕ ವೀಕ್ಷಣೆಗೆ ಅನುವು ಮಾಡಿದೆ.

ಪೌರಾಣಿಕ ನೃತ್ಯ ರೂಪಕ: ಪುರಾಣ ಕಥೆಯ ಪ್ರಕಾರ ಜಮದಗ್ನಿಯ ಪುತ್ರ ಭಾರ್ಗವರಾಮ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಭಾರ್ಗವರಾಮನ ಭಕ್ತಿಗೆ ಮೆಚ್ಚಿ, ಪರಶಿವನು ಶಕ್ತಿಯುತವಾದ ಕೊಡಲಿ ಆಕಾರದ ಅಸ್ತ್ರ ನೀಡುತ್ತಾನೆ. ಲೋಕ ಕಂಟಕನಾಗಿದ್ದ ಕಾರ್ತವೀರ್ಯಾರ್ಜುನ ಮುಂತಾದ ಕ್ಷತ್ರಿಯರನ್ನು ಕೊಡಲಿಯಿಂದ ಸಂಹರಿಸುತ್ತಾ, ಪರಶುರಾಮ ಎಂದೇ ಹೆಸರಾಗುತ್ತಾನೆ. ಪರಶುರಾಮ ಶಿವನ ದರ್ಶನಕ್ಕಾಗಿ ಕೈಲಾಸಕ್ಕೆ ಬರುತ್ತಾನೆ. ಶಿವ ಧ್ಯಾನದಲ್ಲಿದ್ದ ಕಾರಣ ಪರಶುರಾಮನ ಮಾರ್ಗವನ್ನು ಗಣೇಶ ತಡೆಯುತ್ತಾನೆ. ಅಹಂಕಾರದಿಂದ ಕೋಪಗೊಂಡ ಪರುಶರಾಮ ಕೊಡಲಿಯಿಂದ ಗಣೇಶನ ಮೇಲೆ ಯುದ್ಧ ನಡೆಸಿದಾಗ ಅಸ್ತ್ರದ ಶಕ್ತಿ ಕಡಿಮೆಯಾಗಬಾರದೆಂಬ ದೃಷ್ಟಿಯಿಂದ ಗಣೇಶ ಸುಮ್ಮನಾಗಿದ್ದರಿಂದ ಪರುಶರಾಮನ ಅಸ್ತ್ರವು ಗಣೇಶನ ದಂತವನ್ನು ಕತ್ತರಿಸಿದ ಕಾರಣ ಅಂದಿನಿಂದ ಗಣೇಶನು ಏಕದಂತನಾದನು. ಇದರಲ್ಲಿ ಜ್ಞಾನವು ಅಜ್ಞಾನವನ್ನು ಜಯಿಸಬೇಕು ಎಂಬುದು ಈ ರೂಪಕದ ಮೂಲಕ ಪ್ರಸ್ತುತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net