

ಲಿಂಗಸುಗೂರು: ಮನುಕುಲಕ್ಕೆ ಶಾಂತಿ, ಸೌಹಾರ್ದದ ಸನ್ಮಾರ್ಗ ತೋರಿದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ಪಟ್ಟಣದಲ್ಲಿ ಈದ್ ಮಿಲಾದ್ ಅನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಮುಸ್ಲಿಮರು ಮೆಕ್ಕಾ-ಮದೀನಾ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಸಿದರು.
ಬುಧವಾರ ರಾತ್ರಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಜಾಗರಣೆ ಮಾಡಲಾಯಿತು. ಗುರುವಾರ ರಾಜಾ ಬಾಗ್ ಸವಾರ್ ದರ್ಗಾದಿಂದ ಗಡಿಯಾರ ಚೌಕ್, ಬಸ್ ನಿಲ್ದಾಣ ವೃತ್ತದ ಮೂಲಕ ಜಾಮಿಯಾ ಮಸೀದಿವರೆಗೆ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಸಲಾಯಿತು.
ಪ್ರಮುಖರಾದ ಅಹ್ಮದ್ ಚಾವುಸ್, ಮಹಮದ್ ರಫಿ, ಫಯಾಜ್ ಮನಿಯಾರ್, ಅನೀಸ್ ಪಾಷಾ, ಎಕ್ಬಾಲ್ ಹವಾಲ್ದಾರ್, ಖಾಜಹುಸೇನ್ ಫೂಲ್‌ವಾಲೆ, ರವೂಫ್ ಗ್ಯಾರಂಟಿ, ಫೈಸಲ್ ಚಾವೂಸ್, ಹುಸೇನ್ ಸಾಬ್, ಮಹೆಬೂಬ್, ಇಸ್ಮಾಯಿಲ್, ಇಬ್ರಾಹಿಂ, ಹಾರೂನ್ ಸಾಬ್, ಇಕ್ಬಾಲ್ ಸಾಬ್, ದಾದೆಮಿಯಾ, ಅಖ್ತರ್ ಪಟೇಲ್, ಖಾಜಾಹುಸೇನ್, ಜಿಲಾನಿ ಪಾಷಾ, ಅಲ್ಲಾವುದ್ದೀನ್, ಮುನ್ನಾ ಖಾಜಿ, ಅಲ್ಲಾಭಕ್ಷ ಇತರರು ಇದ್ದರು.