ಹೆದ್ದಾರಿಯಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಕ್ರಮ

15 10 2025_BGR_RURAL-PAGE_02
ಚಂದಾಪುರ ರೈಲ್ವೆ ಬ್ರಿಡ್ಜ್​ ಹತ್ತಿರದ ರೈಲ್ವೆ ಓವರ್​ಬ್ರಿಡ್ಜ್​ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರದೇಶದಲ್ಲಿ ಸ್ಥಳವನ್ನು ಸಂಸದ ಡಾ.ಮಂಜುನಾಥ್​ ಅಧಿಕಾರಿಗಳ ಜತೆ ಪರಿಶೀಲಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಕಾರಿ ಯತೀಶ್​, ತಹಸೀಲ್ದಾರ್​ ಶಶಿಧರ್​ ಮಾಡ್ಯಾಳ್​, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್​, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕಿ ಅರ್ಚನಾ, ಡಿವೈಎಸ್ಪಿ ಮೋಹನ್​ ಕುಮಾರ್​, ಪೌರಾಡಳಿತ ಇಲಾಖೆಯ ಮಾಧವಿ ಇದ್ದರು.
Published on

ಆನೇಕಲ್​ : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ -ರಾಷ್ಟ್ರೀಯ ಹೆದ್ದಾರಿ 44ರ ಹೆಬ್ಬಗೋಡಿ&ಚಂದಾಪುರ&ಅತ್ತಿಬೆಲೆ ವಾಹನ ದಟ್ಟಣೆ ನಿಯಂತ್ರಣ ಹಾಗೂ ಮೂಲಸೌಕರ್ಯ ಸುಧಾರಣೆ ಹಿನ್ನೆಲೆಯಲ್ಲಿ ಹೆಬ್ಬಗೋಡಿ ನಗರಸಭೆ ಕಾರ್ಯಾಲಯದಲ್ಲಿ ಮಂಗಳವಾರ ಸಂಸದ ಡಾ.ಮಂಜುನಾಥ್​ ಸಮ್ಮುಖದಲ್ಲಿ ಸಮಗ್ರ ಸಮಾಲೋಚನೆ ಸಭೆ ನಡೆಯಿತು. ವಾಹನ ದಟ್ಟಣೆಯಿಂದ ಸಮಸ್ಯೆ ಇರುವ ಪ್ರದೇಶಗಳಲ್ಲಿ ್ಲೆ$ಓವರ್​ಗಳ ನಿಮಾರ್ಣ, ಎಂಟ್ರಿ&ಎಕ್ಸಿಟ್​ ಮಾರ್ಗಗಳ ಪುನರ್​ ವಿನ್ಯಾಸ, ಸ್ಮಾರ್ಟ್​ ಟ್ರಾಫಿಕ್​ ಮೇನೇಜ್ಮೆಂಟ್​ ಸಿಸ್ಟಮ್​ ಅಳವಡಿಕೆ, ರಸ್ತೆ ಸುರಕ್ಷತಾ ಫಲಕ, ಬೆಳಕು ವ್ಯವಸ್ಥೆ ಬಲಪಡಿಸುವುದು ಹಾಗೂ ಪಾದಚಾರಿ ಸುರಕ್ಷತೆಗೆ ಸಂಬಂಧಿಸಿದ ಕ್ರಮಗಳು, ಕೈಗೊಳ್ಳುವ ಬಗ್ಗೆ ಸಂಸದರು ಹಾಗೂ ಸ್ಥಳಿಯ ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು.

ರಾ.ಹೆದ್ದಾರಿ ಅಭಿವೃದ್ಧಿ ಕಾಮಗಾರಿ, ರೈಲ್ವೆ ಮೂಲಸೌಕರ್ಯ ವಿಸ್ತರಣೆ (ಕೆ-ರೈಡ್​ ಯೋಜನೆ) ಮತ್ತು ಅಂತರಸಂಸ್ಥೆ ಸಹಕಾರದ ಮಹತ್ವ ಕುರಿತು ಅಧಿಕಾರಿ ವರ್ಗದವರಿಗೆ ಸೂಕ್ತ ನಿರ್ದೇಶನ ನೀಡಿದ್ದು, ಯೋಜಿತ ಕಾಮಗಾರಿ, ಸಮಯಪಾಲನೆ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದ ಡಾ.ಮಂಜುನಾಥ್​ ತಿಳಿಸಿದರು. ಬಳಿಕ ಸಂಸದರು ಚಂದಾಪುರ ರೈಲ್ವೆ ಬ್ರಿಡ್ಜ್​ ಹತ್ತಿರದ ರೈಲ್ವೆ ಓವರ್​ಬ್ರಿಡ್ಜ್​ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ನಡೆಸಿ ಬಾಕಿ ಉಳಿದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹೆಬ್ಬಗೋಡಿ ನಗರಸಭಾ ಅಧ್ಯ ಸುಜಾತಾ ಹರೀಶ್​, ಉಪಾಧ್ಯ ಸುಜಾತ.ಕೆ.ಪಿ.ರಮೇಶ್​, ಸ್ಥಾಯಿ ಸಮಿತಿ ಅಧ್ಯ ಜಯರಾಮ್​ ನಗರಸಭಾ ಪೌರಾಯುಕ್ತ ಬಿ.ಎಲ್​.ರಾಜೇಂದ್ರ. ಚಂದಾಪುರ ಪುರಸಭಾ ಅಧ್ಯೆ ಶಾರದಾ ವರದರಾಜು, ಮುಖ್ಯಾಧಿಕಾರಿ ಮಂಜುನಾಥ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net