ಬೀದಿ ನಾಯಿ ಹಾಗೂ ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ

RAICHUR
RAICHUR
Published on

 ರಾಯಚೂರು ನಗರದಲ್ಲಿ ಬೀದಿ ನಾಯಿಗಳ ಮತ್ತು ಬಿಡಾಡಿ ದನಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಮತ್ತು ಪಶುಪಾಲನಾ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಜಂಟಿ ತಂಡ ರಚಿಸಲಾಗಿದ್ದು ತ್ವರಿತವಾಗಿ ಕ್ರಮ ಕೈಗೊಳ್ಳಲಾಗುತ್ತದೆಂದು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಹೇಳಿದರು.

ನಗರದ ಆಯುಕ್ತರ ಕಚೇರಿಯಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೀದಿದನಗಳ ನಿಯಂತ್ರಣಕ್ಕೆ ಕಲಬುರಗಿಯ ಕೇರ್ ಫಾರ್ ಅನಿಮಲ್ಸ್ ಸಂಸ್ಥೆಯಿಂದ ಬಿಡಾಡಿ ದಿನಗಳ ನಿಯಂತ್ರಣಕ್ಕೆ ಮುಂದಾಗಿದೆ. ನಗರದಲ್ಲಿ ಬೀದಿಗಳ ದನಗಳ ಮಾಲೀಕರಿಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಮೊದಲಿಗೆ ಬಿಡಾಡಿ ದನಗಳನ್ನು ಹಿಡಿದು ನಗರದ ಗೋಶಾಲೆಗೆ ರವಾನಿಸಲಾಗುತ್ತದೆ.

ನಂತರ 28 ದಿನಗಳ ಕಾಲ ಮಾಲೀಕರಿಲ್ಲದ ದನಗಳನ್ನು ಕಲಬುರಗಿಯ ಕಲ್ಯಾಣ ಕರ್ನಾಟಕ ಗೋಶಾಲೆಗೆ ಸ್ಥಳಾಂತರಿಸಲಾಗುತ್ತದೆ ಎಂದರು.

ಅದರಂತೆ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಮಂಡ್ಯದ ಕೇರ್ ಫಾರ್ ವಾಯ್ಸ್ ಲೆಸ್ ಅನಿಮಲ್ಸ್ ಮುಖ್ಯಸ್ಥ ಡಾ .ದರ್ಶನ್ ನೇತೃತ್ವದ ತಂಡದ ಬೀದಿನಾಯಿಗಳ ಕಾರ್ಯಾಚರಣೆ ಮಾಡಲಿದ್ದಾರೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕು ಬೀದಿ ನಾಯಿಗಳಿಗೆ ಮಾಂಸ ತ್ಯಾಜ್ಯ ಅಥವಾ ಅಡುಗೆ ತ್ಯಾಜ್ಯ ಬಿಸಾಡದೆ ಸ್ವಚ್ಚತೆ ಕಾಪಾಡಬೇಕು ಎಂದರು.

ನಗರದಲ್ಲಿ ಸುಮಾರು 247 ಕಸದ ತಿಪ್ಪೆ ಗುರುತಿಸಲಾಗಿತ್ತು. ಅವುಗಳಲ್ಲಿ 150 ಕಸದ ತಿಪ್ಪೆ ಸ್ವಚ್ಚತೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಆಯ್ದ ಸ್ಥಳಗಳಲ್ಲಿ ಕಸದ ತೊಟ್ಟಿ ಇರಿಸಲಾಗುತ್ತದೆ. ಮನೆ ಮನೆ ಕಸ ಸಂಗ್ರಹ ಲೋಪವಿದ್ದಲ್ಲಿ ಕ್ರಮ ವಹಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಪಶುಪಾಲನ ಇಲಾಖೆಯ ತಾಲೂಕು ಅಧಿಕಾರಿ ಡಾ.ಬಸವರಾಜ ಪಾಟೀಲ್, ಡಾ.ವಾಲ್ಮೀಕಿ, ಪಾಲಿಕೆ ಇಂಜಿನಿಯರ್ ಜಯಪಾಲರೆಡ್ಡಿ, ಡಾ.ಶಾಕೀರ್ ಹುಸೇನ್ ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net