

ವಿಜಯಪುರ: ಬಬಲೇಶ್ವರ ಮತ ಕ್ಷೇತ್ರದ 20 ಜನವಸತಿ ಪ್ರದೇಶಗಳಿಗೆ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಕಾತ್ರಾಳ, ಹಣಮಸಾಗರ, ಹೊಸೂರ, ಜಂಬಗಿ, ಚಿಕ್ಕಗಲಗಲಿ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡ ಅವರು, ಕಾತ್ರಾಳ ಹಳ್ಳಿ ಮುತ್ಯಾನ ವಸ್ತಿ ಮತ್ತು ಕಾತ್ರಾಳ ಗ್ರಾಮದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮಾತನಾಡಿದರು.
ಈ ಭಾಗದ ಜನ ಶ್ರಮಜೀವಿಗಳು. ಈ ಮುಂಚೆ ನೀರಿಲ್ಲದ ಕಾರಣ ಜನ ಗುಳೆ ಹೋಗುತ್ತಿದ್ದರು. ಈಗ ಈ ಭಾಗದಲ್ಲಿ ಕೆರೆಗಳು ತುಂಬಿವೆ. ನೀರಾವರಿ ಯೋಜನೆಗಳಿಂದಾಗಿ ಈ ಗ್ರಾಮಕ್ಕೆ ಅಂಟಿದ್ದ ಕುಗ್ರಾಮ ಎಂಬ ಹಣೆಪಟ್ಟಿ ತೊಲಗಿದೆ ಎಂದರು.
ಇಲ್ಲಿ ಈಗ 80 ಸಾವಿರ ಟನ್ ಕಬ್ಬು ಬೆಳೆಯಲಾಗುತ್ತಿದ್ದು, ಕೃಷಿ ಕಾರ್ಮಿಕರಿಗೆ ಉತ್ತಮ ಕೂಲಿ ಸಿಗುತ್ತಿದೆ. ಇಲ್ಲಿನ ಜನ ಸದಾ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿ, ಅಭಿವೃದ್ಧಿಯತ್ತ ದಾಪುಗಾಲು ಹಾಕಿದ್ದಾರೆ. ಇದು ಶಾಸಕನಾದ ನನಗೆ ಹೆಮ್ಮೆ ತಂದಿದೆ ಎಂದು ಅವರು ಹೇಳಿದರು.
ಮುಖಂಡರಾದ ಎಸ್.ಡಿ. ಗುಗ್ಗರಿ, ಜಕ್ಕಪ್ಪ ಯಡವೆ, ಅಪ್ಪುಗೌಡ ಪಾಟೀಲ, ಉಮೇಶ ಮಲ್ಲಣ್ಣವರ, ಪ್ರಕಾಶ ಸೊನ್ನದ, ಬಿ.ಎಚ್. ಮುಂಬಾರೆಡ್ಡಿ, ಮುತ್ತಪ್ಪ ಶಿವಣ್ಣವರ, ಗುರುಬಸು, ಮಲ್ಲಪ್ಪ ಕೆಂಪವಾಡ, ಮಂಜು ನರಳಿ, ಬಾಳು ಪಡಸಲಗಿ, ಬಸಪ್ಪಗೌಡ ಬಿರಾದಾರ, ಹನಮಂತ ಗಲಗಲಿ ಮತ್ತಿತರರಿದ್ದರು.
ಎಂ.ಬಿ. ಪಾಟೀಲರ ನೀರಾವರಿ ಯೋಜನೆಗಳಿಂದಾಗಿ ಈ ಭಾಗದಲ್ಲಿ ಅಭಿವೃದ್ಧಿ ಕ್ರಾಂತಿಯಾಗಿದೆ. ಹೆಚ್ಚಿನ ಅಭಿವೃದ್ಧಿಗಾಗಿ ಅವರನ್ನು ಬಾರಿ ಮತಗಳ ಅಂತರದಿಂದ ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ. ಬಾಪುಗೌಡ ಪಾಟೀಲ ಮುಖಂಡರು ಶೇಗುಣಸಿ
ಬಾಪುಗೌಡ ಪಾಟೀಲ ಮುಖಂಡರು ಶೇಗುಣಸಿ
ಡಬ್ಬಲ್ ಇಂಜಿನ್ ಸರ್ಕಾರ ಏಜೆಂಟರು ಮತ್ತು ಉದ್ಯಮಿಗಳ ಪರ ನೀತಿಯನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ಮಾತ್ರ ರೈತರು, ಮಹಿಳೆಯರು, ಯುವಕರು ಮತ್ತು ಸರ್ವಜನರ ಪರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಬಿಜೆಪಿ ಬೆಲೆ ಏರಿಕೆ ಮೂಲಕ ಜನರ ಹಿತ ಕಡೆಗಣಿಸುತ್ತಿದ್ದರೆ ಕಾಂಗ್ರೆಸ್ ಗ್ಯಾರಂಟಿ ಸ್ಕೀಂ ಗಳನ್ನು ಘೋಷಿಸುವ ಮೂಲಕ ಜನ ಸಾಮಾನ್ಯರ ಹಿತ ಕಾಪಾಡುವ ಕೆಲಸ ಮಾಡುತ್ತಿದೆ. ನಮ್ಮದು ಜನಸಾಮಾನ್ಯರ ಸರ್ಕಾರ. ವಿರೋಧಿಗಳದ್ದು ದಲ್ಲಾಳಿಗಳು ಮತ್ತು ಉದ್ಯಮಿಗಳ ಪರ ಸರ್ಕಾರವಾಗಿದೆ. ಎಂ.ಬಿ. ಪಾಟೀಲ ಅಧ್ಯಕ್ಷರು, ಕೆಪಿಸಿಸಿ ಪ್ರಚಾರ ಸಮಿತಿ ಕಾಂಗ್ರೆಸ್
ಎಂ.ಬಿ. ಪಾಟೀಲ ಅಧ್ಯಕ್ಷರು, ಕೆಪಿಸಿಸಿ ಪ್ರಚಾರ ಸಮಿತಿ ಕಾಂಗ್ರೆಸ್