ಭಕ್ತಿ ಕಲಶಾಭಿಷೇಕದಿಂದ ಬದುಕಿನ ಸಾರ್ಥಕತೆ

pdb
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಜೀರ್ಣೋದ್ಧಾರ ಮೂಲಕ ಕಾಪು ಪ್ರಸಿದ್ಧಿಗೆ ಬರುವ ಹಾಗೆ ಆಗಿದೆ. ಅಮ್ಮನ ಸನ್ನಿಧಿಯಲ್ಲಿ ನಡೆದ ಬ್ರಹ್ಮಕಲಶದಂತೆ ನಮ್ಮ ವ್ಯಕ್ತಿತ್ವ ಬ್ರಹ್ಮಕಲಶವಾಗಬೇಕು. ಮನೋ ಮಂದಿರದೊಳಗೆ ದೇವರನ್ನು ಪ್ರತಿಷ್ಠಾಪನೆ ಮಾಡಿ ಭಕ್ತಿ, ಶೃದ್ಧೆ ಕಲಶಾಭಿಷೇಕದಿಂದ ಬದುಕಿನ ಸಾರ್ಥಕತೆಯಾಗುತ್ತದೆ ಎಂದು ಕಟಪಾಡಿ ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಬುಧವಾರ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ 9ನೇ ದಿನದ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಮಹಾದಾನಿ ಪ್ರಭಾಕರ ಶೆಟ್ಟಿ ಮಂಡಗದ್ದೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆೆಟ್ಟಿ, ಬೀನಾ ಶೆಟ್ಟಿ ದಂಪತಿ, ಪ್ರಧಾನ ತಂತ್ರಿ ಕೆ.ಪಿ.ಕುಮಾರಗುರು ತಂತ್ರಿ, ಪ್ರಧಾನ ಅರ್ಚಕ ಕಲ್ಯ ಶ್ರೀನಿವಾಸ ತಂತ್ರಿ, ಶಾಸಕ ಯಶಪಾಲ್ ಸುವರ್ಣ ಮತ್ತಿತರರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ವಿನಯಕುಮಾರ್ ಸೊರಕೆ, ಶಶಿಧರ ಶೆಟ್ಟಿ ಬರೋಡಾ, ತಹಸೀಲ್ದಾರ್ ಪ್ರತಿಭಾ ಆರ್, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಸಿಎ ಎನ್.ಬಿ.ಶೆಟ್ಟಿ, ಹೈಕೋರ್ಟ್ ನ್ಯಾಯವಾದಿ ಶೋಭಿತ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರು, ಮುನಿಯಾಲು ಉದಯ ಶೆಟ್ಟಿ, ಯೋಗೀಶ್ ಶೆಟ್ಟಿ ಬಾಲಾಜಿ ಉಪಸ್ಥಿತರಿದ್ದರು. ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಅಶೋಕ್ ಪಕಳ, ದಾಮೋದರ ಶರ್ಮ ಕಾರ್ಯಕ್ರಮ  ನಿರೂಪಿಸಿದರು.

ಕಾಲ ಪಕ್ವವಾಗಿ ದೇವಸ್ಥಾನವಾಗಬೇಕು ಎನ್ನುವುದು ದೇವರ ಸಂಕಲ್ಪವಾದ್ದರಿಂದ ಈ ವೈಭವದ ಬ್ರಹ್ಮಕಲಶ ಕಾಣಲು ಸಾಧ್ಯವಾಗಿದೆ. ದೇಗುಲಕ್ಕೆ ಬರುವ ಭಕ್ತರನ್ನು ನೋಡಿ ದೇವರ ಚಿಂತನೆ ಮಾಡುತ್ತೇವೆ. ಅಧರ್ಮ, ಸನಾತನ ಸಂಸ್ಕೃತಿ ಬಿಟ್ಟಿರುವವರಿಗೆ ಮಾರಿಕಾಳಾಗಿ, ಧರ್ಮ ರಕ್ಷಣೆ ಮಾಡುವವರಿಗೆ ಜನನಿಯಾಗಿ ಮೆರೆಯುತ್ತಾಳೆ -ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪಲಿಮಾರು ಮಠ https://www.vijayavani.net/gopal-madiwala-elected-as-president https://www.vijayavani.net/bairampalli-panchayat-gram-sabha

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net