ಸಾರ್ಥಕ ಬದುಕಿಗೆ ಗುರು ಕೃಪೆ ಅವಶ್ಯ

12ITAGI1
Published on

ಇಟಗಿ: ಮಹಾತ್ಮರು ತೋರಿದ ಸನ್ಮಾರ್ಗದಲ್ಲಿ ನಡೆದು ಸಾರ್ಥಕ ಬದುಕು ನಡೆಸಲು ಗುರುವಿನ ಕೃಪೆ ಅವಶ್ಯಕ ಎಂದು ಪೀಠಾಧ್ಯ ಚನ್ನಬಸವ ಸ್ವಾಮೀಜಿ ಹೇಳಿದರು.

ಸಮೀಪದ ಬಿಳಕಿ ಅವರೊಳ್ಳಿ ರುದ್ರಸ್ವಾಮಿ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಿಂ.ಶಾಂಡಿಲ್ಯ ಸ್ವಾಮೀಜಿ 8ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಂಡಿಲ್ಯ ಸ್ವಾಮೀಜಿ ಧರ್ಮಜಾಗೃತಿ ಕಾರ್ಯ ಸ್ಮರಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಹಿರಿಯ ಉಪಾಧ್ಯ ಪ್ರಮೋದ ಕೊಚೇರಿ ಮಾತನಾಡಿ, ಚನ್ನಬಸವ ದೇವರು ಹಲವು ಜನಪರ ಮತ್ತು ಸಮಾಜಮುಖಿ ಕಾರ್ಯಕ್ರಮ ಆಯೋಜಿಸುವ ಮೂಲಕ ಯುವಜನತೆಯಲ್ಲಿ ಧರ್ಮಜಾಗೃತಿ ಜತೆಗೆ ಕಾಯಕ ಪ್ರಜ್ಞೆ ಮೂಡಿಸುತ್ತಿರುವುದು ಶ್ಲಾನೀಯ. ಶ್ರೀಮಠದ ನಿರ್ಮಾಣಕ್ಕೆ ಭಕ್ತರ ಸಹಕಾರ ಅಗತ್ಯ ಎಂದು ತಿಳಿಸಿದರು.

ಕಾಡಾ ಮಾಜಿ ಅಧ್ಯ ಅಡಿವೇಶ ಇಟಗಿ ಮಾತನಾಡಿ, ಶ್ರೀಮಠದ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ಇದಕ್ಕೆ ಜನಪ್ರತಿನಿಧಿಗಳ ಮೂಲಕ ಅನುದಾನ ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಮಹಾರುದ್ರಯಾಗ, ಸಂಗೀತ ಹಾಗೂ ಭರತನಾಟ್ಯ ಜರುಗಿತು. ರುಕ್ಮಿಣಿ ಹಲಗೇಕರ, ನಾನಾ ಸಾಹೇಬ ಪಾಟೀಲ, ರಾಣಿ ಶುಗರ್ಸ್​ ಅಧ್ಯಕ್ಷ ಬಸವರಾಜ ಪುಂಡಿ, ಲೈಲಾ ಶುಗರ್ಸ್​ ಎಂಡಿ ಸದಾನಂದ ಪಾಟೀಲ, ಸುಭಾಷ ಗುಳಶೆಟ್ಟಿ, ವಿಜಯ ಸಾಣಿಕೊಪ್ಪ, ಮಹಾಂತೇಶ ರಾವುತ, ಶಂಕರ ಹೊಳಿ, ಸಂಜಯ ಕುಬಲ ಇತರರಿದ್ದರು. ವಿವೇಕ ಕುರಗುಂದ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net