ಸಕಾಲಕ್ಕೆ ಸಾಲ ಮರುಪಾವತಿ ಮಾಡಲು ಮುಂದಾಗಿ

1
Published on

ಕೆ.ಆರ್.ಪೇಟೆ : ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಿ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಅಂಚಿ ಸಣ್ಣಸ್ವಾಮಿಗೌಡ ಹೇಳಿದರು.
ಪಟ್ಟಣದ ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. 250 ರೂಪಾಯಿಯ ಷೇರುಧನದೊಂದಿಗೆ ಆರಂಭವಾದ ನೌಕರರ ಪತ್ತಿನ ಸಹಕಾರ ಸಂಘ ಇಂದು ಎಲ್ಲರ ಸಹಕಾರದಿಂದ ಪ್ರಗತಿಯ ಹಾದಿಯಲ್ಲಿದೆ. ನೌಕರರ ಹಿತಾಸಕ್ತಿ ಕಾಪಾಡುವ ಸಂಘವನ್ನು ಇನ್ನು ಮುಂದೆ ಸಮರ್ಥವಾಗಿ ನಿರ್ವಹಣೆ ಮಾಡಿಕೊಂಡು ಹೋಗುವುದು
ಹೊಸ ಪೀಳಿಗೆಯ ನೌಕರರ ಜವಾಬ್ದಾರಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net