ಶಾಸಕ ಮುನಿರತ್ನ ಬಂಧನಕ್ಕೆ ಆಗ್ರಹ

14KMD-1
Published on

ಕೆ.ಎಂ.ದೊಡ್ಡಿ : ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ದಲಿತರ ಬಗ್ಗೆ ಅವಹೇಳನಕಾರಿ ಪದ ಬಳಸಿರುವುದು ಖಂಡನೀಯ. ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಭಾರತೀನಗರ ಪೊಲೀಸ್ ಠಾಣೆ ಮೂಲಕ ಗೃಹ ಸಚಿವರಿಗೆ ದಲಿತ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರೊಂದಿಗೆ ಮೋಬೈಲ್ ಫೋನ್ ಸಂಭಾಷಣೆಯಲ್ಲಿ ಮುನಿರತ್ನ ದಲಿತರ ಬಗ್ಗೆ ಅ ಸಂವಿಧಾನಿಕ ಪದ ಬಳಸಿದ್ದಾರೆ. ಇದರೊಂದಿಗೆ ಒಕ್ಕಲಿಗರ ಬಗ್ಗೆಯೂ ತೇಜೋವಧೆ ಮಾಡಿದ್ದಾರೆ. ಶಾಸಕ ಮುನಿರತ್ನ ವಿರುದ್ಧ ರಾಜ್ಯಪಾಲರು ಕ್ರಮ ವಹಿಸಿ ಅವರ ಶಾಸಕತ್ವವನ್ನು ರದ್ದು ಮಾಡಬೇಕೆಂದು ಮುಖಂಡರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net