ನಾನ್ ಮೆಡಲಿಸ್ಟ್ ಈಜು ಸ್ಪರ್ಧೆಯಲ್ಲಿ ಎಂಡಿಎಸ್‌ಎ ಈಜುಪಟುಗಳಿಗೆ ಪದಕ

16
Published on

ಮೈಸೂರು: ಮೈಸೂರು ಜಿಲ್ಲಾ ಈಜು ಸಂಸ್ಥೆ(ಎಂಡಿಎಸ್‌ಎ)ಯ ಯುವ ಈಜುಪಟುಗಳು ರಾಜ್ಯ ಮಟ್ಟದ ನಾನ್ ಮೆಡಲಿಸ್ಟ್ ಈಜು ಸ್ಪರ್ಧೆಯಲ್ಲಿ ಪದಕ ಪಡೆದು ಗಮನ ಸೆಳೆದಿದ್ದಾರೆ.

ಮಾರ್ಲಿನ್ ಅಕ್ವಾಟಿಕ್ ಸೆಂಟರ್ ಈಜುಕೊಳದಲ್ಲಿ ಭಾನುವಾರ ನಡೆದ ಸ್ಪರ್ಧೆಯಲ್ಲಿ ಎಂಡಿಎಸ್‌ಎಯ ಆಧ್ಯಾ, ಸಿ.ಅದ್ವಿಕ್ ಹಾಗೂ ಆರ್ಯನ್ ಕವನ್ ಗೌಡ ಪದಕ ಬೇಟೆ ನಡೆಸಿದ್ದಾರೆ. ಬಾಲಕಿಯರ ಗ್ರೂಪ್-3 ವಿಭಾಗದ 200 ಮೀಟರ್ ವೈಯಕ್ತಿಕ ಮಿಡ್ಲೆ ಹಾಗೂ 50 ಮೀ.ಬ್ಯಾಕ್ ಸ್ಟ್ರೋಕ್‌ನಲ್ಲಿ ಆಧ್ಯಾ ಕಂಚಿನ ಪದಕ ಪಡೆದರು. ಬಾಲಕರ ಗ್ರೂಪ್-4 ವಿಭಾಗದ 50 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಸಿ.ಅದ್ವಿಕ್ ಕಂಚಿನ ಪದಕ ಪಡೆದರು. ಇದೇ ವಿಭಾಗದ 50 ಮೀ. ಬಟರ್ ಫ್ಲೈನಲ್ಲಿ ಆರ್ಯನ್ ಕವನ್ ಗೌಡ ಕೂಡ ಕಂಚಿನ ಪದಕ ಪಡೆದರು.

ಈ ಮೂವರು ಯುವ ಈಜುಗಾರರು ಎಂಡಿಎಸ್‌ಎ ಮುಖ್ಯ ತರಬೇತುದಾರ ಸ್ಕಂದ ಆರ್.ಅಶ್ವಥ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. 15 ರಾಷ್ಟ್ರೀಯ ದಾಖಲೆಗಳನ್ನು ಹೊಂದಿರುವ ಸ್ಕಂದ, 42 ರಾಷ್ಟ್ರೀಯ ಪದಕಗಳನ್ನು ಹೊಂದಿರುವ ಏಕೈಕ ಮೈಸೂರಿನವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net