ಅಂಗವಿಕಲರಿಗೆ ಸಲಕರಣೆ ವಿತರಣೆ ಇಂದು

19-pnp 1
Published on

ಮದ್ದೂರು: ಜಿಲ್ಲಾ ವಿಶೇಷ ಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಅಲಿಂಕೋ ಸಂಸ್ಥೆ ವತಿಯಿಂದ ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಅವಶ್ಯಕ ಸಾಧನ, ಸಲಕರಣೆ ವಿತರಣೆ ಶಿಬಿರ ಜೂ. 20 ರಂದು ಆಯೋಜನೆಗೊಂಡಿದೆ. ಅಂದು ಬೆಳಗ್ಗೆ 10ಕ್ಕೆ ಪಟ್ಟಣದ ಎಚ್.ಕೆ. ವೀರಣ್ಣಗೌಡ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂಗವಿಕಲರು ಮತ್ತು ಹಿರಿಯ ನಾಗರಿಕರು ಭಾಗವಹಿಸಿ ಸಲಕರಣೆಗಳನ್ನು ಪಡೆಯಬಹುದು ಎಂದು ಸರ್ವೋದಯ ವಿಕಲಚೇತನರ ಸಂಘದ ತಾಲೂಕು ಅಧ್ಯಕ್ಷ ಎಸ್.ಸಿ.ರಮೇಶ್ ತಿಳಿಸಿದ್ದಾರೆ. ಈ ಸಂದರ್ಭ ವಾಕರ್, ವಾಕ್ ಸ್ಟಿಕ್, ವ್ಹೀಲ್ ಚೇರ್, ಟ್ರೈಸಿಕಲ್, ಕಂಕಳು ದೊಣ್ಣೆ, ಪ್ಲಾಸ್ಟಿಕ್ ಕಾಲು, ಶ್ರವಣ ಸಾಧನ, ಎಂಸಿಆರ್ ಚಪ್ಪಲಿಗಳನ್ನು ವಿತರಣೆ ಮಾಡಲಾಗುತ್ತದೆ. ಇವುಗಳನ್ನು ಪಡೆಯವ ಮುನ್ನ ಆಧಾರ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಪಾಸ್ ಪುಸ್ತಕ, ಯುಡಿಐಡಿ ಕಾರ್ಡ್, ರೇಷನ್ ಕಾರ್ಡ್, ಯುಡಿಐಡಿ ಸರ್ಟಿಫಿಕೇಟ್, ಭಾವಚಿತ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಮತ್ತಿತರ ದಾಖಲೆಗಳು ಮತ್ತು ಅವುಗಳ ಜೆರಾಕ್ಸ್ ಪ್ರತಿಗಳನ್ನು ಗಳನ್ನು ತರಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net