ಕಟ್ಟೆ ಆಂಜನೇಯ ದೇಗುಲ ಉದ್ಘಾಟನೆ ನಾಳೆ

06arsph1ep
Published on
  • ಮದ್ದೂರು : ತಾಲೂಕಿನ ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚುಂಚೇಗೌಡನದೊಡ್ಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕಟ್ಟೆ ಆಂಜನೇಯಸ್ವಾಮಿ ದೇಗುಲದ ಉದ್ಘಾಟನೆ, ವಿಮಾನ ಗೋಪುರ, ಮಹಾಕುಂಭಾಭಿಷೇಕ ಕಾರ್ಯಕ್ರಮ ಮೇ. 9, 10 ಮತ್ತು 11 ರಂದು ನೆರವೇರಲಿದೆ.
    9ರ ಸಂಜೆ 5.30ಕ್ಕೆ ವಿವಿಧ ಪೂಜಾ ಕೈಂಕರ್ಯಗಳು ಆರಂಭವಾಗುವುದು. ಮೇ.1 ರಂದು ಹೋಮ, ಹವನ ಸೇರಿದಂತೆ ದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
    11 ರಂದು ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಸಾವಿರರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ. ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯತ್ತಿರುವುದರಿಂದ ಚುಂಚೇಗೌಡನದೊಡ್ಡಿ ಗ್ರಾಮಸ್ಥರು ತಳಿರು ತೋರಣಗಳಿಂದ ಗ್ರಾಮವನ್ನು ಮದುವಣಗಿತ್ತಿಯಂತೆ ಸಿಂಗರಿಸಿ ದೇವತಾ ಕಾರ್ಯಕ್ರಮ ಮಾಡಲು ಸಕಲ ಸಿದ್ಧರಾಗಿದ್ದಾರೆ.
    ಜಿಲ್ಲೆಯಲ್ಲಿರುವ ಆಂಜನೇಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕಟ್ಟೆ ಅಂಜನೇಯ ಸ್ವಾಮಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net