ಸರ್.ಎಂ.ವಿ. ಪುತ್ಥಳಿಗೆ ಪುಷ್ಪಾರ್ಚನೆ

oppo_2
pushparchane to sir M V Statue in Vadagerehalli
Published on

ಮದ್ದೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಆಸ್ಥಾನದಲ್ಲಿ ದಿವಾನರಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದ
ಸರ್.ಎಂ. ವಿಶ್ವೇಶ್ವರಯ್ಯ ನಾಡಿಗೆ ಆದರ್ಶ ಎಂದು ರೈತ ನಾಯಕಿ ಸುನಂದಾ ಜಯರಾಂ ಅಭಿಪ್ರಾಯಪಟ್ಟರು.
ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಸರ್.ಎಂ. ವಿಶೇಶ್ವರಯ್ಯ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.ಯಥಾ ರಾಜ ತಥಾ ಪ್ರಜಾ ಎಂಬ ಗಾದೆಯಂತೆ ಒಡೆಯರ್ ಮುಂದಾಲೋಚನೆ ಹಾಗೂ ದಿವಾನರ ಪರಿಶ್ರಮದಿಂದ ಕನ್ನಂಬಾಡಿ ಜಲಾಶಯ ನಿರ್ಮಾಣವಾಯಿತು. ಇದರಿಂದ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಸಾಧ್ಯವಾಯಿತು ಎಂದು ಸುನಂದಾ ಅಭಿಪ್ರಾಯಪಟ್ಟರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ. ಉಮಾಶಂಕರ್ ಮಾತನಾಡಿ ಜಿಲ್ಲೆಯಲ್ಲಿ ಇಬ್ಬರು ಮಹನೀಯರ ಜಯಂತೋತ್ಸವ ಕಾರ್ಯಕ್ರಮವನ್ನು ಒಂದೇ ವೇದಿಕೆಯಲ್ಲಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂದಾಲೋಚನೆ ಫಲವೇ ಜಿಲ್ಲೆಯಲ್ಲಿ ಹಸಿರು ಕ್ರಾಂತಿ.
ಸಾವಿರಾರು ರೈತರು ಸಂತೃಪ್ತಿ ಜೀವನ ನಡೆಸಲು ಇಬ್ಬರು ಮಹನೀಯರೇ ಕಾರಣಕರ್ತರಾಗಿದ್ದಾರೆ. ಬ್ಯಾಂಕ್ ಉನ್ನತೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದಲ್ಲದೇ ನಿರುದ್ಯೋಗ ಸಮಸ್ಯೆಯನ್ನೂ ದೂರಮಾಡಿದ ಮಹಾತ್ಮರು ಅವರು ಎಂದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net