12ರಂದು ರೇಣುಕಾ ಎಲ್ಲಮ್ಮ ಜಾತ್ರಾ ಮಹೋತ್ಸವ

11M.D.R.1
Published on

ಮದ್ದೂರು : ಪಟ್ಟಣದ ಹೊಳೆ ಬೀದಿಯಲ್ಲಿರುವ, ಚಿಕ್ಕಸವದತ್ತಿ ಎಂದೇ ಪ್ರಸಿದ್ಧಿಯಾಗಿರುವ ಶ್ರೀ ರೇಣುಕಾ ಎಲ್ಲಮ್ಮದೇವಿಯ ಜಾತ್ರಾ ಮಹೋತ್ಸವ ಫೆ. 12ರಂದು ನೆರವೇರಲಿದೆ. ಭಾರತ ಹುಣ್ಣಿಮೆ ಅಂಗವಾಗಿ ಜಾತ್ರೆ ನೆರವೇರಲಿದು, ದೇಗುಲ ಮತ್ತು ಪಟ್ಟಣದ ಹೊಳೆ ಬೀದಿಯನ್ನು ತಳಿರು, ತೋರಣಗಳಿಂದ ಸಿಂಗರಿಸಲಾಗಿದೆ. ಪ್ರಮುಖ ರಸ್ತೆ, ದೇವಸ್ಥಾನದ ಮಹಾದ್ವಾರಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಅಂದು ಬೆಳಗ್ಗೆ 26 ನೇ ವರ್ಷದ ಮಹಾ ಚಂಡಿಕಾಯಾಗ ನಡೆಯಲಿದೆ. ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗದ ನಂತರ ಸುಮಂಗಲಿಯರಿಂದ ದೇವಿಗೆ ತಂಬಿಟ್ಟಿನ ಆರತಿ, ಮಧ್ಯಾಹ್ನ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಸಂಜೆ ದೇವಿಗೆ ನಿಂಬೆಹಣ್ಣಿನ ದೀಪದಾರತಿ, ಉಯ್ಯಲೋತ್ಸವ, ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ದೇವಿ ಸನ್ನಿಧಿವರೆಗೆ ಮುತ್ತಿನ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿದೆ.

ಜಾನಪದ ಮೇಳ : ರಾತ್ರಿ 7 ಕ್ಕೆ ತಿರುಪತಿ -ತಿರುಮಲ ದೇವಸ್ಥಾನದ ಕಲಾವಿದ ಮಂಜು ಬಾಲಾಜಿ ತಂಡದ ವಾದ್ಯಗೋಷ್ಠಿ, ಮಂಗಳೂರಿನ ಯಕ್ಷಗಾನ, ಕೇರಳದ ಚಂಡೆ ಮೇಳ, ತಮಿಳುನಾಡಿನ ಬ್ಯಾಂಡ್, ಪೂಜಾ ಕುಣಿತ, ತಮಟೆ, ನಗಾರಿ, ಜಾನಪದ ಮೇಳವಿದೆ ಎಂದು ಧರ್ಮದರ್ಶಿ ಶ್ರೀನಿವಾಸ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net