ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂಧ ಮುಷ್ಕರ

10M.D.R.1
Published on

ಮದ್ದೂರು : ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಘಟಕದಿಂದ ಸೋಮವಾರ ಮುಷ್ಕರ ನಡೆಸಲಾಯಿತು. ಅಭಿವೃದ್ಧಿಪಡಿಸಲಾಗಿರುವ ಸುಮಾರು 17 ಆ್ಯಪ್ ಮೂಲಕ ( ವೆಬ್ ತಂತ್ರಾಂಶ ) ಕರ್ತವ್ಯ ನಿರ್ವಹಿಸಲು ಒತ್ತಡವಾಗುತ್ತಿದೆಯೆಂದು ಆರೋಪಿಸಿ ಗ್ರಾಮ ಆಡಳಿತ ಅಧಿಕಾರಿಗಳು ಸೋಮವಾರ ತಹಸೀಲ್ದಾರ್ ಸ್ಮಿತಾ ರವರಿಗೆ ಮನವಿ ಸಲ್ಲಿಸಿದರು.

ತಂತ್ರಾಂಶ ಶನಿರ್ವಹಣೆಗೆ ಅಗತ್ಯವಾದ ಲ್ಯಾಪ್ ಟಾಪ್, ಇಂಟರ್ನೆಟ್, ಸ್ಕ್ಯಾನರ್ ಸೇರಿದಂತೆ ಅಗತ್ಯವಾದ ಸಾಧನಗಳನ್ನು ಒದಗಿಸದೇ ಒತ್ತಡ ಹೇರಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು. ಘಟಕದ ಅಧ್ಯಕ್ಷ ಚನ್ನಬಸಪ್ಪ, ಕಾರ್ಯದರ್ಶಿ ಮರುಳಸಿದ್ದೇಶ, ಉಪಾಧ್ಯಕ್ಷ ಪ್ರಮೋದ್, ಖಜಾಂಚಿ ಮಂಜುನಾಥ್, ಮೋಹನ್ ಟಿ. ಪಿ, ರವಿ, ನಿಂಗೇಗೌಡ ಸೇರಿದಂತೆ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net