ಸಚಿವರ ಬಗ್ಗೆ ಲಘುವಾದ ಮಾತು ಸಲ್ಲದು

04M.D.R.1K.N.DIVAKAR
Published on

ಮದ್ದೂರು : ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಅವರು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ ಎಂದು ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್ ಹೇಳಿದರು. ಜಿಲ್ಲೆಗೆ ಚಲುವರಾಸ್ವಾಮಿ ಏನು ಕೊಡುಗೆ ನೀಡಿದ್ದಾರೆ ಎಂಬುದು ಗೊತ್ತಿದೆ. ಆದರೆ ಈ ಬಗ್ಗೆ ನಿಖಿಲ್ ಯಾವುದೇ ಸರ್ಟಿಫಿರ್ಕೇಟ್ ಕೊಡುವ ಅಗತ್ಯವಿಲ್ಲ ಎಂದು ಅವರು ಶುಕ್ರವಾರ

ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಚ್.ಡಿ.ಕುಮಾರಸ್ವಾಮಿ ಸಚಿವರಾದ ನಂತರ ಮಂಡ್ಯ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಮೊದಲು ನಿಖಿಲ್ ವಿವರಸಿದಲಿ. ನಂತರ ಚಲುವರಾಯಸ್ವಾಮಿ ಏನು ಕೊಡುಗೆ ನೀಡಿದ್ದಾರೆ ಎಂದು

ನಾವು ದಾಖಲೆ ಸಮೇತ ನೀಡುತ್ತೇವೆ ಎಂದು ಸವಾಲ್ ಹಾಕಿದರು. ನಿಖಿಲ್ 3 ಬಾರಿ ಚುನಾವಣೆಗಳಲ್ಲಿ ಸೋತು, ಮತದಾರರಿಂದ ತಿರಸ್ಕೃತಗೊಂಡವರು. ಅವರಿಗೆ ಇನ್ನೂ ಬುದ್ಧಿಬಂದಂತೆ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಚೆಲುವರಾಯಸ್ವಾಮಿ ಬಗ್ಗೆ ಲಘುವಾಗಿ ಮಾತನಾಡಿದರೆ ನಾವೂ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಅವರು ಕೆ.ಎನ್.ದಿವಾಕರ್ ಎಚ್ಚರಿಕೆ ನೀಡಿದರು.

ನಿಖಿಲ್ ಚುನಾವಣೆಗೆ ಸ್ಪರ್ಧಿಸುವ ಸಂದರ್ಭ ಚನ್ನಪಟ್ಟಣ, ರಾಮನಗರ ಹಾಗೂ ಮಂಡ್ಯ ಕ್ಷೇತ್ರಗಳು ನನ್ನ ಕಣ್ಣು ಇದ್ದಂತೆ ಎಂದು ಹೇಳುತ್ತಾರೆ. ಇವರಿಗೆ ಸ್ವಂತವಾದ ಒಂದು ಕ್ಷೇತ್ರವಿಲ್ಲ. ಮೊದಲು ಇವರ ತವರು ಕ್ಷೇತ್ರ ಯಾವುದು ಎಂದು ಜನರಿಗೆ ತಿಳಿಸಲಿ. ಯಾವುದಾದರೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ ಚಲುವರಾಯಸ್ವಾಮಿ ಬಗ್ಗೆ ಮಾತನಾಡಲಿ ಎಂದರು.

ನಿಖಿಲ್ ಮುಂಬರುವ ದಿನಗಳಲ್ಲಿ ಜಿಲ್ಲೆಗೆ ಆಗಮಿಸಿದ ಸಂದರ್ಭ ತಮ್ಮ ಪಕ್ಷ, ಸಂಘಟನೆ ಬಗ್ಗೆ ಮಾತನಾಡಿ ಕೊಂಡು ಹೋಗಲಿ. ಚಲುವರಾಯಸ್ವಾಮಿ, ಕಾಂಗ್ರೆಸ್ ಬಗ್ಗೆ ಮಾತನಾಡುವುದು ಸಲ್ಲದು ಎಂದು ತಾಕೀತು ಮಾಡಿದರು. ಗ್ರಾಪಂ ಅಧ್ಯಕ್ಷ ಸಂತೋಷ್ ಕೊಟ್ಟಿಗೆಯಾರ್, ಸದಸ್ಯರಾದ ಪರ್ವಿಜ್‌ಅಹಮದ್, ಗಿರೀಶ್, ಸಾವಿತ್ರಿ ಸುರೇಶ್, ವಿಎಸ್‌ಬಿಎನ್ ನಿರ್ದೇಶಕ ಶಿವಲಿಂಗಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net