ಮಣಿಪಾಲದಲ್ಲಿ 4 ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾತ್ರೆ ವಶ

Drugs
Published on

ಉಡುಪಿ: ಮಣಿಪಾಲದ ಆರ್.ಟಿ.ಒ ಕಚೇರಿ ರಸ್ತೆಯ ಎಂಡ್ ಪಾಯಿಂಟ್ ಬಳಿ ಕಾಲೇಜು ವಿದ್ಯಾರ್ಥಿಗಳಿಗೆ ನಿಷೇಧಿತ ಎಂಡಿಎಂಎ ಮಾತ್ರೆ ಮಾರಾಟಕ್ಕೆ ಯತ್ನಿಸಿದ ಓರ್ವ ಯುವಕನನ್ನು ಬುಧವಾರ ರಾತ್ರಿ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬ್ರಹ್ಮಾವರ ನಿವಾಸಿ ಮಹಮ್ಮದ್ ಫಜಲ್ ಬಂಧಿತ. ಈತ ತನ್ನ ಸ್ನೇಹಿತರಾದ ಉಡುಪಿಯ ಫರ್ಹಾನ್ ಮತ್ತು ಸಫಾ ಜತೆಗೆ ಸೇರಿ ಕೆಲವು ಡ್ರಗ್ ್ಸ ಮಾತ್ರೆ ಹಾಗೂ ಬ್ರೌನ್‌ಶುಗರ್‌ಗಳನ್ನು ಆನ್‌ಲೈನ್‌ನಲ್ಲಿ ತರಿಸಿಕೊಂಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಆತನ ಬಳಿಯಿದ್ದ 2 ಮೊಬೈಲ್‌ಪೋನ್, 54 ನಿಷೇಧಿತ ಎಂಡಿಎಂಎ ಎಕ್‌ಸ್ಟೇಸಿ ಮಾತ್ರೆ, 30 ಗ್ರಾಂ ಬ್ರೌನ್ ಶುಗರ್, ಚುನಾವಣಾ ಗುರುತು ಚೀಟಿ, 2 ಡೆಬಿಟ್ ಕಾರ್ಡ್ ಸೇರಿ ಒಟ್ಟು 4,63,600 ರೂ.

ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net