

ಕಾಸರಗೋಡು: ಕಾರಿನಲ್ಲಿ ಮಾದಕ ವಸ್ತು ಎಂಡಿಎಂಎ ಸಾಗಿಸುತ್ತಿದ್ದ ನೆಕ್ರಾಜೆ ಪೈಕ ಬಾಲಡ್ಕ ನಿವಾಸಿ ಆಫ್ರೀನ್ ಅನ್‌ವಾಸ್ ಪಿ.ಎಂ ಹಾಗೂ ನೀರ್ಚಾಲು ಕನ್ಯಪ್ಪಾಡಿ ನಿವಾಸಿ ಹಮೀದ್ ಎನ್ ಎಂಬುವವರನ್ನು ಅಬಕಾರಿ ಇನ್ಸ್‌ಪೆಕ್ಟರ್ ಜೋಸೆಫ್ ನೇತೃತ್ವದ ತಂಡ ಮಾಯಿಪ್ಪಾಡಿಯಲ್ಲಿ ಬಂಧಿಸಿದ್ದಾರೆ. ಇವರಿಂದ 2.419ಗ್ರಾಂ ಎಂಡಿಎಂಎ ಹಾಗೂ ಸಂಚಾರಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.