ಡಿಸಿಸಿ ಬ್ಯಾಂಕ್‌ಗೆ 4.51 ಕೋಟಿ ರೂ ಲಾಭ: ಅಧ್ಯಕ್ಷ ಸಿ.ಪಿ.ಉಮೇಶ್ ಹೇಳಿಕೆ

mdcc bank meeting
Published on

ಮಂಡ್ಯ: ಎಂಡಿಸಿಸಿ ಬ್ಯಾಂಕ್ ಕಳೆದ ಐದು ವರ್ಷಗಳಿಂದ ಸತತವಾಗಿ ಲಾಭ ಗಳಿಸುತ್ತಿದ್ದು 2021-22ನೇ ಸಾಲಿಗೆ ರೂ.4.51ಕೋಟಿ ಲಾಭ ಗಳಿಸಿರುತ್ತದೆ ಎಂದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್ ತಿಳಿಸಿದರು.

ನಗರದ ಹೊಳಲು ರಸ್ತೆಯಲ್ಲಿರುವ ಎ ಅಂಡ್ ಎ ಕನ್ವೆನ್ಷನ್ ಸೆಂಟರ್ ನಲ್ಲಿ ಶನಿವಾರ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ 2021-22 ನೇ ಸಾಲಿನ 61 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬ್ಯಾಂಕ್ ಕೃಷಿ ಸಾಲ ವಸೂಲಾತಿಯಲ್ಲಿ ಶೇ.96.88 ರಷ್ಟು ಹಾಗೂ ಕೃಷಿಯೇತರ ಸಾಲಗಳಲ್ಲಿ ಶೇ.98.65 ರಂತೆ ಒಟ್ಟಾರೆ ಶೇ.97.71 ರಷ್ಟು ವಸೂಲಾತಿಯಲ್ಲಿ ಪ್ರಗತಿ ಸಾಧಿಸಿರುತ್ತದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ರೈತರಿಗೆ ಬ್ಯಾಂಕಿಂಗ್ ವ್ಯವಹಾರವನ್ನು ಉತ್ತೇಜಿಸುವ ದೃಷ್ಟಿಯಿಂದ ಬ್ಯಾಂಕಿನ ವಹಿವಾಟನ್ನು ಆಧರಿಸಿ ಡಿಸಿಸಿ ಬ್ಯಾಂಕು 10 ನೂತನ ಗ್ರಾಮಾಂತರ ಶಾಖೆಗಳನ್ನು ತೆರೆಯಲು ಸಹಕಾರ ಸಂಘಗಳ ನಿಬಂಧಕರು ಅನುಮತಿಸಿ ರುತ್ತಾರೆ. ನೂತನ ಶಾಖೆಗಳನ್ನು ಪ್ರಾರಂಭಿಸಲು ಬ್ಯಾಂಕ್ ಕ್ರಮವಿಟ್ಟಿರುತ್ತದೆ. ಇದಲ್ಲದೆ 19 ಶಾಖೆಗಳನ್ನು ತೆರೆಯುವ ಸಂಬಂಧ ಸಹಕಾರ ಸಂಘಗಳ ನಿಬಂಧಕರ ಅನುಮತಿಗಾಗಿ ಪತ್ರ ಬರೆಯಲಾಗಿದೆ. ಈ ಮೂಲಕ ಬ್ಯಾಂಕಿನ ಆರ್ಥಿಕ ವ್ಯವಹಾರವನ್ನು ಹೆಚ್ಚಿಸಲು ಕ್ರಮವಿಡಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳ ಆತ್ಮ ನಿರ್ಧಾರ ಯೋಜನೆಯಡಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಮಂಡ್ಯ ಜಿಲ್ಲೆಯ ರೈತಾಪಿ ವರ್ಗದವರಿಗೆ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಘಟಕ ಸ್ಥಾಪನೆ ದೇಶಕ್ಕಾಗಿ ಬ್ಯಾಂಕಿನ ವತಿಯಿಂದ ಸಾಲ ಸೌಲಭ್ಯ ಒದಗಿಸುವ ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ. ಜಿಲ್ಲೆಯ ವಿದ್ಯಾವಂತ ಉದ್ಯೋಗಿಗಳು ನಿರುದ್ಯೋಗಿಗಳ ವಿಸ್ತೃತ ಯೋಜನಾ ವರದಿಯ ಆಧಾರದ ಮೇಲೆ ಸಾಲ ಸೌಲಭ್ಯ ನೀಡುವ ಮೂಲಕ ಸ್ವಾವಲಂಬಿಯಾಗಿ ದುಡಿಯಲು ಅನುವು ಮಾಡಿಕೊಡಲಾಗುತ್ತದೆ ಎಂದು ಹೇಳಿದರು.

ಎಂಡಿಸಿಸಿ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಎಂ.ಶಶಿಕುಮಾರ್, ಉಪಾಧ್ಯಕ್ಷ ಹೆಚ್.ಕೆ.ಅಶೋಕ, ಆಡಳಿತ ಮಂಡಳಿಯ ನಿರ್ದೇಶಕರಾದ ಗುರುಸ್ವಾಮಿ, ಅಮರಾವತಿ ಸಿ.ಅಶ್ವಥ್, ಕೆ.ಸಿ.ಜೋಗಿ ಗೌಡ, ಪಿ.ಎಸ್.ಚಂದ್ರಶೇಖರ್, ಎಚ್.ಎಸ್.ನರಸಿಂಹಯ್ಯ,ಪಿ.ಸಂದರ್ಶ, ಕೆ.ವಿ. ದಿನೇಶ್, ಎಚ್.ಸಿ.ಕಾಳೇಗೌಡ, ಪಿ.ಚಲುವರಾಜು, ಎಚ್.ಅಶೋಕ, ವೃತ್ತಿಪರ ನಿರ್ದೇಶಕರಾದ ಕೆ.ಎ.ಚಂದ್ರಶೇಖರ, ಹೆಚ್.ವಿ. ಅಶ್ವಿನ್ ಕುಮಾರ್ , ಸಹಕಾರ ಸಂಘಗಳ ಉಪನಿಬಂಧಕ ಜೆ.ವಿಕ್ರಮರಾಜ ಅರಸ್ , ಪ್ರಭಾರ ಪ್ರಧಾನ ವ್ಯವಸ್ಥಾಪಕಿ ಆರ್.ಜೆ.ರೂಪಶ್ರೀ ಸೇರಿದಂತೆ ಇತರರು ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net