ಶಿರಸಿ ಬಸ್ ನಿಲ್ದಾಣ ಕಾಮಗಾರಿ ವಿಳಂಬ ಎಂಡಿ ಅಸಮಾಧಾನ

Nwkrtc visit
Published on

ಕಾರವಾರ:ಶಿರಸಿ ವಾ.ಕ.ರಸಾ.ಸಂಸ್ಥೆ ವಿಭಾಗಕ್ಕೆ ಇತ್ತಿಚಿಗೆ ವಾ.ಕ.ರ.ಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ .ಎಂ. ಭೇಟಿ ನೀಡಿ ಶಿರಸಿ ಹಳೆ ಬಸ್ ನಿಲ್ದಾಣದ ಕಾಮಗಾರಿ ಕಾರ್ಯಗಳನ್ನು ವೀಕ್ಷಿಸಿ, ಕಾಮಗಾರಿ ಕಾರ್ಯವೂ ತೀರಾ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿ, ಕಾಂಟ್ರಾಕ್ಟರಗಳಿಗೆ ಕಾಮಗಾರಿ ಕಾರ್ಯವನ್ನು ಚುರುಕುಗೊಳಿಸಿ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಶಿರಸಿ ಘಟಕದ ಆವರಣದಲ್ಲಿ ಕಾಂಕ್ರಿಟಿಕರಣ, ವಿಭಾಗೀಯ ಕಾರ್ಯಾಗಾರದ ಕಟ್ಟಡ ನವೀಕರಣದ ಬಗ್ಗೆ ಪರಿಶೀಲಿಸಿ ವಿಭಾಗ ಮಟ್ಟದ ಎಲ್ಲ ಅಧಿಕಾರಿಗಳ ಸಭೆಯನ್ನು ವಿಭಾಗೀಯ ಕಛೇರಿ ಶಿರಸಿಯಲ್ಲಿ ನಡೆಸಿ, ಸಾರಿಗೆ ಕಾರ್ಯಾಚರಣೆಯನ್ನು ಉತ್ತಮಗೊಳಿಸುವ ಹಾಗೂ ಸಾರ್ವಜನಿಕರಿಗೆ ಉತ್ತಮ ರೀತಿಯ ಸಾರಿಗೆ ಸೌಲಭ್ಯವನ್ನು ಒದಗಿಸುವ ಬಗ್ಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net