

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ 60 ವಾರ್ಡ್‌ಗಳ ಎಲ್ಲ ಉದ್ದಿಮೆದಾರರು ಕಡ್ಡಾಯವಾಗಿ ಉದ್ದಿಮೆ ಪರವಾನಿಗೆ ಪಡೆಯಬೇಕು. ಆನ್‌ಲೈನ್ ತಂತ್ರಾಶದ ಮೂಲಕ ಹೊಸ ಉದ್ದಿಮೆದಾರರು ಅರ್ಜಿ ಸಲ್ಲಿಸಿ ಉದ್ದಿಮೆ ಪರವಾನಿಗೆ ಪಡೆಯಬಹುದು.
ಉದ್ದಿಮೆದಾರರು ಈ ಹಿಂದಿನ ಆರ್ಥಿಕ ವರ್ಷದಲ್ಲಿ ಪಡೆದುಕೊಂಡಿರುವ ಉದ್ದಿಮೆ ಪರವಾನಿಗೆ ನವೀಕರಿಸದೆ ಇದ್ದಲ್ಲಿ ಹಿಂದಿನ ಬಾಕಿ ಹಾಗೂ ನವೀಕರಣ ಶುಲ್ಕವನ್ನು ಆನ್‌ಲೈನ್‌ನಲ್ಲಿ ತಕ್ಷಣ ಪಾವತಿಸುವಂತೆ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಪಾಲಿಕೆಯ ಆರೋಗ್ಯ ನಿರೀಕ್ಷಕರು ಸ್ಥಳ ಪರಿಶೀಲನೆಯ ಸಮಯದಲ್ಲಿ ಉದ್ದಿಮೆ ಪರವಾನಿಗೆ ಇಲ್ಲದ ಹಾಗೂ ಈವರೆಗೂ ನವೀಕರಣ ಮಾಡದ ಉದ್ದಿಮೆದಾರರಿಗೆ ನಿಯಾಮಾನುಸಾರ ಹೆಚ್ಚುವರಿ ದಂಡ ವಿಧಿಸಲಾಗಿ, ಮುಂದಿನ ಕ್ರಮ ಜರುಗಿಸಲಾಗುತ್ತದೆ . ಹೆಚ್ಚಿನ ಮಾಹಿತಿಗೆ ದೂ.ಸಂ: 6364016555 ಸಂಪರ್ಕಿಸಬಹುದು ಎಂದು ಮನಪಾ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.