ಮೇಯರ್ ಸ್ಥಾನಕ್ಕೆ ಸುಧೀರ್ ಶೆಟ್ಟಿ ಹೆಸರು ಅಂತಿಮ

download
Published on




ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಬಿಜೆಪಿಯ ಹಿರಿಯ ಸದಸ್ಯ , ಕೊಡಿಯಾಲ್‌ಬೈಲ್ ವಾರ್ಡ್‌ನ ಕಾರ್ಪೋರೇಟರ್ ಸುಧೀರ್ ಶೆಟ್ಟಿ ಕಣ್ಣೂರು ಅವರ ಹೆಸರನ್ನು ಬಿಜೆಪಿ ಅಂತಿಮಗೊಳಿಸಿದೆ ಎನ್ನುವ ಮಾಹಿತಿ ಇದೆ. ಉಪ ಮೇಯರ್ ಹುದ್ದೆ ಎಸ್‌ಸಿ ಮಹಿಳೆ ಮೀಸಲಾತಿ ಹೊಂದಿದ್ದು, ಪಣಂಬೂರು ವಾರ್ಡ್‌ನ ಬಿಜೆಪಿ ಕಾರ್ಪೋರೇಟರ್ ಸುನೀತಾ ಮಾತ್ರ
ಸ್ಪರ್ಧೆಗೆ ಅರ್ಹರಾಗಿದ್ದಾರೆ.
ಅವಧಿಯ ಮೇಯರ್, ಉಪಮೇಯರ್ ಹಾಗೂ 4 ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆ ಸೆ.8ರಂದು ಮಧ್ಯಾಹ್ನ 12ಕ್ಕೆ ಪಾಲಿಕೆಯ ಮಂಗಳ ಸಭಾಂಗಣದಲ್ಲಿ ನಡೆಯಲಿದೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಚುನಾವಣೆ
ನಡೆಯಲಿದೆ.
60 ಸದಸ್ಯ ಬಲದ ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ಬಿಜೆಪಿ 44 ಸದಸ್ಯರನ್ನು ಹೊಂದಿದ್ದು ಸ್ಪಷ್ಟ ಬಹುಮತ ಪಡೆದಿದೆ.
ಮೇಯರ್ ಹುದ್ದೆ ಸಾಮಾನ್ಯ ಮೀಸಲು ಇರುವ ಕಾರಣ ಸ್ಪರ್ಧೆಗೆ ಎಲ್ಲರೂ ಅರ್ಹರು. ಹಿರಿತನದ ಆಧಾರದಲ್ಲಿ ಸುಧೀರ್ ಶೆಟ್ಟಿ ಕಣ್ಣೂರು (3ನೇ ಅವಧಿ ) ಅವರಿಗೆ ಪಕ್ಷ ಅವಕಾಶ ಕಲ್ಪಿಸಿದೆ ಎನ್ನಲಾಗಿದೆ.
* ಕಾಂಗ್ರೆಸ್ ಸ್ಪರ್ಧೆ :
ಪ್ರತಿಪಕ್ಷ ಕಾಂಗ್ರೆಸ್ ಕೂಡಾ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲಿದ್ದು, ಹಿರಿಯ ಕಾರ್ಪೋರೇಟರ್ ನವೀನ್ ಡಿಸೋಜಾ ಅವರಿಗೆ
ನಾಮಪತ್ರ ಸಲ್ಲಿಸಲು ಪಕ್ಷ ಸೂಚನೆ ನೀಡಿದೆ. ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಅರ್ಹ ಮೀಸಲು ಅಭ್ಯರ್ಥಿಗಳಿಲ್ಲದ ಕಾರಣ ಬಿಜೆಪಿ ಕಾರ್ಪೋರೇಟರ್ ಸುನೀತಾ ಅವಿರೋಧ ಆಯ್ಕೆಯಾಗಲಿದ್ದಾರೆ.

*ಮನಪಾ ಪಕ್ಷಗಳ ಬಲಾಬಲ
ಬಿಜೆಪಿ-44
ಕಾಂಗ್ರೆಸ್-14
ಎಸ್‌ಡಿಪಿಐ-2
...............................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net