ಭೂ ಸ್ವಾಧೀನ ಪರಿಹಾರ ಪಾವತಿಸದ ಹಿನ್ನೆಲೆ ಮನಪಾ ಆಯುಕ್ತರ ಕಚೇರಿ ಜಪ್ತಿಗೆ ಯತ್ನ

mng--12 Oct Mcc
Published on


ಮಂಗಳೂರು: ನಗರದ ಪಂಪ್‌ವೆಲ್‌ನಲ್ಲಿ ಹೊಸ ಬಸ್ ನಿಲ್ದಾಣ ರಚನೆಗೆ ಭೂಸ್ವಾಧೀನ ಪಡಿಸಿ ಪರಿಹಾರ ಪಾವತಿಸದ ಕಾರಣಕ್ಕೆ ಮಂಗಳೂರು ಹಿರಿಯ ಪ್ರಧಾನ ನ್ಯಾಯಾಲಯದ ಆದೇಶ ಮೇರೆಗೆ ಕೋರ್ಟ್ ಅಧಿಕಾರಿಗಳ ತಂಡ ಮಹಾನಗರ ಪಾಲಿಕೆಯ ಭೂಸ್ವಾಧೀನ ವಿಭಾಗ ಹಾಗೂ ಆಯುಕ್ತರ ಕಚೇರಿಯನ್ನು ಜಫ್ತಿ ಮಾಡಲು ಮುಂದಾದ ಘಟನೆ ಬುಧವಾರ ನಡೆದಿದೆ.


ಬಳಿಕ ಪಾಲಿಕೆ ಆಯುಕ್ತರು ಮಂಗಳೂರಿನ ಹಿರಿಯ ಪ್ರಧಾನ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ, ಪರಿಹಾರ ಪಾವತಿಗೆ ಅ.25ರ ವರೆಗೆ ಗಡುವು ಕೇಳಿದ ಹಿನ್ನೆಲೆಯಲ್ಲಿ ಜಪ್ತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ ಎಂದು ಪಾಲಿಕೆ ಕಮಿಷನರ್ ಅಕ್ಷಿ ಶ್ರೀಧರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net