

ಮಂಗಳೂರು: ಮಂಗಳೂರು ಕಥೋಲಿಕ್ ಕೊ- ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಅನಿಲ್ ಲೋಬೊ ಅವರ ತಂಡದ ಎಲ್ಲ 14 ಮಂದಿ ಸದಸ್ಯರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಬ್ಯಾಂಕಿನ 111 ವರ್ಷಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನಿರ್ದೇಶಕ ಮಂಡಳಿಯ ಆಯ್ಕೆ ಅವಿರೋಧವಾಗಿ ಡೆದಿದ್ದು, ವೆಲೆನ್ಸಿಯಾ ನಿವಾಸಿ ಅನಿಲ್ ಲೋಬೊ ನೇತೃತ್ವದ ತಂಡದಲ್ಲಿ ಜೆರಾಲ್ಡ್ ಪಿಂಟೋ ಕಲ್ಯಾಣ್‌ಪುರ, ರೋಶನ್ ಡಿಸೋಜ ಮುಡಿಪು, ಹೆರಾಲ್ಡ್ ಜೋನ್ ಮೊಂತೆರೊ ಕೆಲರಾಯ್, ಜೋಸೆಫ್ ಎಂ.ಅನಿಲ್ ಪತ್ರಾವೊ ದೇರೆಬೈಲ್, ಡೇವಿಡ್ ಡಿಸೋಜ ಬಜಪೆ, ಮೆಲ್ವಿನ್ ಅಕ್ವಿನಸ್ ವಾಸ್ ಮಂಗಳೂರು, ಜೆ.ಪಿ.ರೊಡ್ರಿಗಸ್ ಪುತ್ತೂರು, ಆಂಡ್ರು ಡಿಸೋಜ ಮೂಡಬಿದ್ರಿ, ಎಲ್‌ರೊಯ್ ಕಿರಣ್ ಕ್ರಾಸ್ಟೊ ಗಂಗೊಳ್ಳಿ, ಜೆರಾಲ್ಡ್ ಜೂಡ್ ಡಿಸಿಲ್ವ ಕಾರ್ಕಳ, ವಿನ್ಸೆಂಟ್ ಅನಿಲ್ ಲಸ್ರಾದೊ ಬಂಟ್ವಾಳ, ಐರಿನ್ ರೆಬೆಲ್ಲೊ ಕುಲಶೇಖರ ಮತ್ತು ಫ್ರೀಡಾ ಫ್ಲಾವಿಯಾ ಡಿಸೋಜ ಬಳ್ಕುಂಜೆ ಇದ್ದಾರೆ.
ಎಲ್ಲ ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ ಹಿನ್ನೆಲೆಯಲ್ಲಿ ಆಗಸ್ಟ್ 27 ರಂದು ನಡೆಯಬೇಕಿದ್ದ ಚುನಾವಣೆ ಪ್ರಕ್ರಿಯೆ ನಡೆಯುವುದಿಲ್ಲ ಎಂದು ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ತಿಳಿಸಿದ್ದಾರೆ.
ಹಾಲಿ ಬ್ಯಾಂಕಿನ ಆಡಳಿತ ಮಂಡಲಿಯ ಅವಧಿಯು ಆಗಸ್ಟ್ 26 ರಂದು ಕೊನೆಗೊಳ್ಳಲಿದ್ದು, ನಂತರ ನೂತನ ಆಡಳಿತ ಮಂಡಳಿ ರಚನೆಯಾಗಲಿದೆ. ನೂತನ ಆಡಳಿತ ಮಂಡಳಿಯು ಐದು ವರ್ಷಗಳ ಅಧಿಕಾರ ಅವಧಿಯನ್ನು ಹೊಂದಿದೆ.