ಎಂಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷ ಅನಿಲ್ ಲೋಬೊ ತಂಡ ಅವಿರೋಧ ಪುನರಾಯ್ಕೆ

mcc
ಮಂಗಳೂರು ಕೆಥೊಲಿಕ್ ಕೋ-ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಅನಿಲ್ ಲೋಬೊ ತಂಡದ ಎಲ್ಲ 14 ಸದಸ್ಯರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
Published on

ಮಂಗಳೂರು: ಮಂಗಳೂರು ಕೆಥೊಲಿಕ್ ಕೋ-ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಅನಿಲ್ ಲೋಬೊ ತಂಡದ ಎಲ್ಲ 14 ಸದಸ್ಯರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಬ್ಯಾಂಕಿನ 111 ವರ್ಷಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿ ನಿರ್ದೇಶಕ ಮಂಡಳಿಯ ಆಯ್ಕೆ ಅವಿರೋಧವಾಗಿ ನಡೆದಿದ್ದು, ವೆಲೆನ್ಸಿಯಾ ನಿವಾಸಿ ಅನಿಲ್ ಲೋಬೊ ನೇತೃತ್ವದ ತಂಡದಲ್ಲಿ ಜೆರಾಲ್ಡ್ ಪಿಂಟೊ ಕಲ್ಯಾಣ್‌ಪುರ, ರೋಶನ್ ಡಿಸೋಜ ಮುಡಿಪು, ಹೆರಾಲ್ಡ್ ಜಾನ್ ಮೊಂತೇರೊ ಕೆಲರಾಯ್, ಜೋಸೆಫ್ ಎಂ., ಅನಿಲ್ ಪತ್ರಾವೊ ದೇರೆಬೈಲ್, ಡೇವಿಡ್ ಡಿಸೋಜ ಬಜ್ಪೆ, ಮೆಲ್ವಿನ್ ಅಕ್ವಿನಸ್ ವಾಸ್ ಮಂಗಳೂರು, ಜೆ.ಪಿ.ರೋಡ್ರಿಗಸ್ ಪುತ್ತೂರು, ಆಂಡ್ರೂೃ ಡಿಸೋಜ ಮೂಡುಬಿದಿರೆ, ಎಲ್‌ರಾಯ್ ಕಿರಣ್ ಕ್ರಾಸ್ಟೊ ಗಂಗೊಳ್ಳಿ, ಜೆರಾಲ್ಡ್ ಜೂಡ್ ಡಿಸಿಲ್ವ ಕಾರ್ಕಳ, ವಿನ್ಸೆಂಟ್ ಅನಿಲ್ ಲಸ್ರಾದೊ ಬಂಟ್ವಾಳ, ಐರಿನ್ ರೆಬೆಲ್ಲೊ ಕುಲಶೇಖರ ಮತ್ತು ಫ್ರೀಡಾ ಫ್ಲಾವಿಯಾ ಡಿಸೋಜ ಬಳ್ಕುಂಜೆ ಇದ್ದಾರೆ.

ಎಲ್ಲ ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದ ಕಾರಣ ಆಗಸ್ಟ್ 27ರಂದು ನಡೆಯಬೇಕಿದ್ದ ಚುನಾವಣಾ ಪ್ರಕ್ರಿಯೆ ನಡೆಯುವುದಿಲ್ಲ ಎಂದು ಬ್ಯಾಂಕಿನ ಮಹಾಪ್ರಬಂಧಕ ಸುನೀಲ್ ಮಿನೇಜಸ್ ತಿಳಿಸಿದ್ದಾರೆ. ಹಾಲಿ ಬ್ಯಾಂಕಿನ ಆಡಳಿತ ಮಂಡಳಿಯ ಅವಧಿ ಆಗಸ್ಟ್ 26ರಂದು ಕೊನೆಗೊಳ್ಳಲಿದ್ದು, ನಂತರ ನೂತನ ಆಡಳಿತ ಮಂಡಳಿ ರಚನೆಯಾಗಲಿದೆ. ನೂತನ ಆಡಳಿತ ಮಂಡಳಿ ಐದು ವರ್ಷಗಳ ಅಧಿಕಾರ ಅವಧಿ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net