

ಮಡಿಕೇರಿ:
ಕೊಡಗು ಕ್ರೀಡಾಪಟುಗಳು ಮತ್ತು ದೇಶ ಸೇವೆ ಮಾಡುವ ಸೈನಿಕರನ್ನು ತಯಾರಿ ಮಾಡುವ ಜಿಲ್ಲೆ ಎಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಹೇಳಿದರು. ಮಡಿಕೇರಿಯ ಮ್ಯಾನ್ಸ್ ಕಾಂಪೌAಡ್ ಕ್ಲಬ್(ಎಂಸಿಸಿ) ವತಿಯಿಂದ ಇಲ್ಲಿನ ಜಿಲ್ಲಾ ಕ್ರೀಡಾಂಡಣದ ಫುಟ್‌ಬಾಲ್ ಮೈದಾನದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಾನುವಾರ ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಎಲ್ಲ ಸಮುದಾಯದವರಿದ್ದಾರೆ. ಹಾಗಾಗಿ ಒಂದು ಸಮುದಾಯದವರಿಗೆಂದು ಸೀಮಿತ ಮಾಡಬಾರದು, ಕೊಡಗು ಎಲ್ಲರಿಗೂ ಸೇರಿದ ಜಿಲ್ಲೆಯಾಗಿದೆ. ಕೊಡಗು ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿದ್ದು, ಜಿಲ್ಲೆಯ ಶಾಸಕರುಗಳು ಈ ಬಗ್ಗೆ ಗಮನ ಹರಿಸಿ ಈಗಿನಿಂದಲೇ ಪ್ರವಾಸೋದ್ಯಮದ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಂಡಲ್ಲಿ ಮುಂದಕ್ಕೆ ಜಿಲ್ಲೆಯೂ ಅಭಿವೃದ್ಧಿಯಾಗಲಿದೆ. ಯುವ ಪೀಳಿಗೆ ಕೂಡ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು, ಎದೆಗುಂದಬಾರದು. ಜಿಲ್ಲಾ ಕ್ರೀಡಾಂಗಣಕ್ಕೆ ಹೆಜ್ಜೆಯಿಡುವದೇ ಪುಣ್ಯದ ಕೆಲಸ, ಇಲ್ಲಿ ಆಡಿದವರು ರಾಜ್ಯ, ರಾಷ್ಟç ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಮೈದಾನದ ಮಾನ್ಯತೆ, ಪ್ರಾಮುಖ್ಯತೆಯನ್ನು ಅರಿತುಕೊಳ್ಳಬೇಕೆಂದರು.
ಎಲ್ಲರಿಗೂ ಸಮಸ್ಯೆಗಳು ಎದುರಾಗುತ್ತವೆ, ಕ್ರೀಡಾಪಟುಗಳಿಗಂತೂ ಸಮಸ್ಯೆ ಬಂದೇ ಬರುತ್ತದೆ. ಯಾರಿಗೇ ಆಗಲೀ ಯಾವದೇ ಸಮುದಾಯದವರಿಗಾಗಲೀ ಒಕ್ಕಲಿಗರ ಸಂಘದ ಮೂಲಕ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಶೇ.25ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಅದೂ ಅಲ್ಲದೆ, ತನ್ನನ್ನು ಸಂಪರ್ಕ ಮಾಡಿದರೆ ತನ್ನ ಅನುದಾನದಿಂದ ರೂ.25ಸಾವಿರದಷ್ಟು ಒದಗಿಸಿಕೊಡಲಾಗುವದೆಂದು ರವೀಂದ್ರ ಹೇಳಿದರು.
ಇದೇ ಸಂದರ್ಭದಲ್ಲಿ ರವೀಂದ್ರ ಅವರನ್ನು ಎಂಸಿಸಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಎಂಸಿಸಿ ಅಧ್ಯಕ್ಷ ಕ್ರಿಸ್ಟೋಫರ್, ಕಾರ್ಯದರ್ಶಿ ಉಮೇಶ್ ಕುಮಾರ್, ಖಜಾಂಚಿ ಪ್ರಸನ್ನ, ಎಂಸಿಸಿ ಹಿರಿಯ ಆಟಗಾರ, ಭಾರತ ತಂಡವನ್ನು ಪ್ರತಿನಿಸಿದ ಬೆಪ್ಪುರನ ಅಣ್ಣಪ್ಪ, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಪಾಣತ್ತಲೆ ಜಗದೀಶ್, ಎಂಸಿಸಿ ಹಿರಿಯ ಆಟಗಾರರುಗಳಾದ ವಾಸು, ರವಿ, ಪೀಟರ್, ಬೆಂಜಮಿನ್ ಪ್ರಶಾಂತ್, ಅಶೋಕ್, ಸುರ್ಜಿತ್, ದಿನೇಶ್ ಸೇರಿದಂತೆ ಇತರರು ಇದ್ದರು. ಪ್ರದೀಪ್ ಮರಗೋಡು ಕಾರ್ಯಕ್ರಮ ನಿರ್ವಹಣೆಯೊಂದಿಗೆ ವೀಕ್ಷಕ ವಿವರಣೆ ನೀಡಿದರು. ತೀರ್ಪುಗಾರರಾಗಿ ರಾಷ್ಟಿçÃಯ ತೀರ್ಪುಗಾರ ಇಸ್ಮಾಯಲ್ ಕಂಡಕೆರೆ ಕಾರ್ಯ ನಿರ್ವಹಿಸಿದರು.