ಚೇತನ ಬಿ ಸ್ಕೂಲ್ ನಲ್ಲಿ ಎಂಸಿಎ ಕೋರ್ಸ್

IMG_20240906_115207_814.jpg
Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಶ್ರೀನಗರದಲ್ಲಿರುವ ದ್ಯಾವಪ್ಪನವರ ಕೊರವಿ ಸಿದ್ನಾಳ ಎಜುಕೇಶನ್ ಟ್ರಸ್ಟ್‌ನ ಚೇತನ ಬಿಜನೆಸ್ ಸ್ಕೂಲ್ ನಲ್ಲಿ ಎರಡು ವರ್ಷದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (ಎಂಸಿಎ) ಕೋರ್ಸ್ ಆರಂಭ ಮಾಡಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ವಿ.ಎಂ. ಕೊರವಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂತ್ರಜ್ಞಾನದ ಅಭಿವೃದ್ಧಿ ಮತ್ತು ಅಳವಡಿಕೆಗೆ ಸಮರ್ಪಕವಾಗಿ ಬೇಕಾಗುವ ಮಾನವ ಸಂಪನ್ಮೂಲ ಸೃಷ್ಟಿಸುವ ಉದ್ದೇಶದಿಂದ ಈ ವರ್ಷದಿಂದ ಹೊಸ ಕೋರ್ಸ್ ಪ್ರಾರಂಭ ಮಾಡಲಾಗಿದೆ.

ಕರ್ನಾಟಕ ಸರ್ಕಾರ, ಕರ್ನಾಟಕ ವಿಶ್ವವಿದ್ಯಾಲಯ, ಎಐಸಿಟಿಇ ಮಾನ್ಯತೆ ಪಡೆಯಲಾಗಿದೆ. 120 ವಿದ್ಯಾರ್ಥಿಗಳಿಗೆ ಎಂಸಿಎ ಕಲಿಯುವ ಅವಕಾಶವಿದೆ ಎಂದರು.

ಈಗಾಗಲೇ ಎಂಸಿಎ ಕೋರ್ಸಗೆ ಬೇಕಾಗುವ ಶಿಕ್ಷಕ ಸಿಬ್ಬಂದಿ ಮತ್ತು ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ ಮಾಡಲಾಗಿದೆ. ಎಂಬಿಎ ರೀತಿಯಲ್ಲಿ ಎಂಸಿಎ ವಿದ್ಯಾರ್ಥಿಗಳಿಗೂ ಉದ್ಯೋಗಾವಕಾಶದ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಸಂಸ್ಥೆಯಲ್ಲಿ ಎಲ್ಲ ಕೋರ್ಸ್ ಗಳಿಗೆ ಪ್ರತ್ಯೇಕ ವಿಭಾಗ ಮಾಡಲಾಗಿದೆ. ಎಂಸಿಎ ವಿಭಾಗಕ್ಕೆ ಕಿರಣಕುಮಾರ ಮುಖ್ಯಸ್ಥರಾಗಿ ಕೆಲಸ ಮಾಡುವರು ಎಂದರು.

ರಾಷ್ಟ್ರ ಮಟ್ಟದ ಜಿಎಚ್ಆರ್ಡಿಸಿ ಕಾಂಪಿಟಿಷನ್ ಸಕ್ಸೆಸ್ ಇವರ ವಾರ್ಷಿಕ ಸಮೀಕ್ಷೆಯಲ್ಲಿ ಚೇತನ್ ಬಿ ಸ್ಕೂಲ್‌ಗೆ ಸತತವಾಗಿ 8 ವರ್ಷಗಳಿಂದ ಶ್ರೇಣಿ ಲಭ್ಯವಾಗಿದೆ. 2023ರಲ್ಲಿ ರಾಷ್ಟ್ರೀಯ ವಿಭಾಗದ ಪ್ರಾಮಿಸಿಂಗ್ ಬಿ ಸ್ಕೂಲ್ ವಿಭಾಗದಲ್ಲಿ 2ನೇ ಸ್ಥಾನ ಲಭಿಸಿದೆ ಎಂದರು.

ಪ್ರೊ. ರಮಾಕಾಂತ ಕುಲಕರ್ಣಿ, ಪ್ರೊ. ಕೆ.ಎಸ್. ಕೌಜಲಗಿ, ಡಾ. ಭಾರ್ಗವ ರೇವಣಕರ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net