ಜಾಬಿನ್ ಕಾಲೇಜಿನಲ್ಲಿ ಎಂಸಿಎ ಕೋರ್ಸ್ ಆರಂಭ

Published on

ಹುಬ್ಬಳ್ಳಿ: ಕೆಎಲ್ಇ ಸಂಸ್ಥೆಯ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದಲ್ಲಿ 2025- 2026ನೇ ಸಾಲಿನಿಂದ ಎಂ.ಸಿ.ಎ. ಪ್ರಥಮ ವರ್ಷಕ್ಕೆ ಉನ್ನತ ಶಿಕ್ಷಣ ಇಲಾಖೆಯು ಅನುಮತಿ ನೀಡಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಮಾನ್ಯತೆ ನೀಡಿದ್ದು, ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಂಯೋಜನೆ ಹೊಂದಿದೆ.

120 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶವಿದ್ದು, ಪಿ.ಜಿ. ಸಿಇಟಿ ಮೂಲಕ 60 ಮತ್ತು 60 ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ವತಿಯಿಂದ ಪ್ರವೇಶ ತೆಗೆದುಕೊಳ್ಳಬಹುದಾಗಿದೆ. ಕಾಲೇಜಿನ ಪಿ.ಜಿ. ಸಿ.ಇ.ಟಿ. ಕೋಡ್ ಸಿ-627 ಇರುತ್ತದೆ.

ನೂತನ ಪಠ್ಯಕ್ರಮದೊಂದಿಗೆ ಎಂ.ಸಿ.ಎ. ಕೋರ್ಸ್ ಆರಂಭವಾಗಿದೆ. ಕೃತಕ ಬುದ್ದಿಮತ್ತೆ, ಉದ್ಯಮಗಳ ಆಧಾರಿತ, ತಂತ್ರಾಂಶ ತಂತ್ರಜ್ಞಾನ, ಬಹುರಾಷ್ಟ್ರೀಯ ಒಡಂಬಡಿಕೆ, ಸುಸಜ್ಜಿತವಾದ ವರ್ಗಕೊಣೆಗಳು ಮತ್ತು ಪ್ರಯೋಗಾಲಯಗಳು, ಗ್ರಂಥಾಲಯ, ಪರಿಣಿತ ಉಪನ್ಯಾಸಕರ ಮೂಲಕ ತಾಂತ್ರಿಕ ಮತ್ತು ಸಂಹವನ ಕೌಶಲ್ಯಗಳ ಗುಣಾತ್ಮಕ ಶಿಕ್ಷಣವನ್ನು ನೀಡಲು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆಂದು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯ ಡಾ. ಸಂಧ್ಯಾ ಕುಲಕರ್ಣಿ ಮತ್ತು ಮುಖ್ಯಸ್ಥ ಪ್ರೊ. ಸಿದ್ಧಲಿಂಗಪ್ಪಾ ಕಡಕೋಳ ಅವರನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net