

ಕಲಬುರಗಿ: ಬಿ.ಆರ್ ಪಾಟೀಲ್ ಹಾಗೂ ರಾಜು ಕಾಗೆ ಪಕ್ಷದ ಹಿರಿಯರು. ಸಿಎಂ ಸಿದ್ದರಾಮಯ್ಯ ಈಗಾಗಲೇ ಬಿ.ಆರ್ ಪಾಟೀಲ್ರನ್ನು ಕರೆದಿದ್ದಾರೆ. ಸಮಸ್ಯೆಯನ್ನು ಸಿಎಂ ಬಗೆಹರಿಸುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದಲ್ಲಿ ಅನೇಕ ಹಿರಿಯರಿದ್ದಾರೆ. ಸಮಸ್ಯೆ ಬಗ್ಗೆ ಏನೇ ಇದ್ದರು ರ‍್ಚಿಸಿ, ಬಗೆಹರಿಸುತ್ತಾರೆ. ಸಣ್ಣ ಪುಟ್ಟ ವ್ಯತ್ಯಾಸ ಹಿರಿಯರು ಸರಿಪಡಿಸಲಿದ್ದಾರೆ. ಹಿಂದೆ ಬಿಜೆಪಿ ಇದ್ದಾಗ ಸಮಸ್ಯೆಗೆ ಬೆಲೆ ಕೊಡುತ್ತಿರಲಿಲ್ಲ. ನಮ್ಮಲ್ಲಿ ಶಾಸಕರ ಸಮಸ್ಯೆಗೆ ಬೆಲೆ ಕೊಡುತ್ತಿದ್ದೇವೆ. ನನ್ನ ಕ್ಷೇತ್ರದಲ್ಲಿ ಸಮಸ್ಯೆಯಾಗಿಲ್ಲ. ಆಡಿಯೋದಲ್ಲಿ ಯಾರೋ ಅಧಿಕಾರಿಗಳು ತಪ್ಪು ಮಾಡಿದ್ದಾರೆಂದು ಇದೆ. ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಇಲಾಖೆ ತಿಳಿಸಿದೆ. ಶಾಸಕ ಗೋಪಾಲಕೃಷ್ಣ, ಸಚಿವ ಜಮೀರ್ ರಾಜೀನಾಮೆ ಕೇಳಿದರ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರು.
ಗುವಿವಿ ಬಿ.ಇಡಿ ಹಗರಣ ಸಿಐಡಿಗೆ ರಾಜ್ಯಪಾಲರಿಗೆ ಶಿಫಾರಸು: ಗುಲ್ಬರ್ಗ ವಿಶ್ವವಿದ್ಯಾನಿಲಯದಲ್ಲಿ ಬಿ.ಇಡಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ಕುರಿತು ಶೀಘ್ರವೇ ಸಿಐಡಿ ತನಿಖೆ ನಡೆಸಲು ರಾಜ್ಯಪಾಲರ ಅನುಮತಿ ಕೋರಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದರು.
ವಿವಿಗಳಲ್ಲಿ ನಡೆಯುವ ಪರೀಕ್ಷೆಗಳು ಪಾರರ‍್ಶಕವಾಗಿ ನಡೆಸಲು ಅಲ್ಲಿನ ಸಿಬ್ಬಂದಿ ಹಾಗೂ ಮುಖ್ಯಸ್ಥರು ಹೊಣೆ. ಆದರೆ, ಯಾಕೆ ಹೀಗಾಗುತ್ತಿದೆ ಎನ್ನುವುದು ತಿಳಿಯುತ್ತಿಲ್ಲ. ಗುಲ್ರ‍್ಗ ವಿಶ್ವವಿದ್ಯಾಲಯ ರಾಯಚೂರು ಮತ್ತು ಶಿವಮೊಗ್ಗ ಯೂನಿರ‍್ಸಿಟಿಗಳಲ್ಲಿ ಇಂತಹ ಗೊಂದಲ ಮತ್ತು ಅಕ್ರಮಗಳು ನಡೆಯುತ್ತಿರುವುದು ಪದೇ ಪದೇ ಬಯಲಿಗೆ ಬರುತ್ತಿದೆ. ಆದ್ದರಿಂದ ಎಲ್ಲ ಮಾಧ್ಯಮಗಳಲ್ಲಿ ನಡೆಯುತ್ತಿರುವ ಪರೀಕ್ಷೆಗಳ ಅಕ್ರಮ ಕುರಿತು ಪ್ರಾಥಮಿಕ ವರದಿ ತರಿಸಿಕೊಳ್ಳುತ್ತಿದ್ದೇವೆ. ಪ್ರಾಥಮಿಕ ವರದಿ ಆಧರಿಸಿ ಮುಂದಿನ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಗುಲ್ರ‍್ಗ ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ ಎನ್ನಲಾದ ಬಿ.ಇಡಿ ಪರೀಕ್ಷೆ ಅಂಕ ತಿದ್ದುವುದು ಹಾಗೂ ಅಕ್ರಮಗಳು ಕುರಿತು ಪ್ರರ‍್ಥಮಿಕ ವರದಿ ತರಿಸಿಕೊಳ್ಳಲಾಗಿದೆ. ಸಿಐಡಿಗೆ ಒಪ್ಪಿಸಲು ರಾಜ್ಯಪಾಲರ ಅನುಮತಿ ಕೇಳಲಾಗುವುದು. ನಂತರ ಸಿಐಡಿ ತನಿಖೆಗೆ ಒಪ್ಪಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.