ಎಂ.ಬಿ. ಪಾಟೀಲರನ್ನು ಮತ್ತೊಮ್ಮೆ ಗೆಲ್ಲಿಸಿ - ಆಶಾ ಪಾಟೀಲ

MB Win Patil again
ಬಬಲೇಶ್ವರ ಮತಕ್ಷೇತ್ರದ ಅಭ್ಯರ್ಥಿ ಎಂ.ಬಿ. ಪಾಟೀಲ ಪರ ಅವರ ಪತ್ನಿ ಆಶಾ ಪಾಟೀಲ ಅವರು ಬಾಬಾನಗರ ಗ್ರಾಮದಲ್ಲಿ ಮತಯಾಚನೆ ಮಾಡಿದರು.
Published on

ವಿಜಯಪುರ: ಎಂ.ಬಿ. ಪಾಟೀಲರು ಜಾತ್ಯತೀತ ಮತ್ತು ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಕೆಲಸಗಳನ್ನು ಪರಿಗಣಿಸಿ ಎಂ.ಬಿ. ಪಾಟೀಲರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಅವರ ಪತ್ನಿ ಆಶಾ ಎಂ. ಪಾಟೀಲ ಮನವಿ ಮಾಡಿದರು.

ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದ ಅವರು, ವಿರೋಧಿಗಳಲ್ಲಿ ಈಗ ಪ್ರಸ್ತಾಪಿಸಲು ಯಾವುದೇ ವಿಷಯಗಳಿಲ್ಲ. ಎಲ್ಲ ಅಸ್ತ್ರಗಳು ಮುಗಿದಿರುವ ಹಿನ್ನೆಲೆಯಲ್ಲಿ ಅಳುವ ಹೊಸ ನಾಟಕ ಶುರುವಿಟ್ಟುಕೊಂಡಿದ್ದಾರೆ.

ಕಳೆದ ಮೂರು ಚುನಾವಣೆಗಳಲ್ಲಿ ಗುಂಡಾಗಿರಿ ನಡೆಸಿದರು. ಅದು ವರ್ಕೌಟ್ ಆಗದ ಕಾರಣ ಈಗ ಅಳುವ ತಂತ್ರ ಅನುಸರಿಸುತ್ತಿದ್ದಾರೆ. ಇದು ಯಶಸ್ವಿಯಾಗುವುದಿಲ್ಲ ಎಂದರು.

ಮುಖಂಡರಾದ ಯಲ್ಲಾಲಿಂಗ ಹೊನವಾಡ, ಪ್ರಕಾಶ ಆಯತವಾಡ ಮತ್ತು ರಾವಸಾಬ ಬಿರಾದಾರ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ರಾವಸಾಬ ಬಿರಾದಾರ, ಪಾರೀಶ ಆಯತವಾಡ, ಸಿದ್ದಗೊಂಡ ರುದ್ರಗೌಡರ, ಭಾಗರಥಿ ತೇಲಿ, ರೇಣುಕಾ ಸುನೀಲಗೌಡ ಪಾಟೀಲ, ಕಲ್ಪನಾ ಪಾಟೀಲ, ಸುನಿತಾ ನೂಲಿ, ಪ್ರತಿಭಾ ಪಾಟೀಲ ಸಂಗಯ್ಯಸ್ವಾಮಿ, ಕಾಶಿರಾಯ ಡೆಂಗೆನವರ, ಕಸ್ತೂರಿ ಬಿರಾದಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net