ಎಂ.ಬಿ.ರುದ್ರೇಗೌಡ ನಿಧನ

17 ckm 2
ಚಿಕ್ಕಮಗಳೂರಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನಲ್ಲಿ ಸಂತಾಪ ಸಭೆ ನಡೆಸಿ ಇತ್ತೀಚೆಗೆ ಮೃತಪಟ್ಟ ಬ್ಯಾಂಕ್ ನಿರ್ದೇಶಕ ರುದ್ರೇಗೌಡ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಿ.ಎಸ್.ರಂಗನಾಥ್, ಸತೀಶ್ ಗೌಡ, ಬಸವೇಶ್, ರವೀಶ್, ಈಶ್ವರಹಳ್ಳಿ ಮಹೇಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಹಾಲಿ ನಿರ್ದೇಶಕ ಎಂ.ಬಿ.ರುದ್ರೇಗೌಡ ಅವರು ಅಕಾಲಿಕ ನಿಧನರಾದ ಹಿನ್ನೆಲೆಯಲ್ಲಿ ಬುಧವಾರ ಆಡಳಿತ ಮಂಡಳಿಯಿAದ ಕಚೇರಿಯ ಸಭಾಂಗಣದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂತಾಪ ಸೂಚಿಸಲಾಯಿತು.

ಈ ವೇಳೆ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ರಂಗನಾಥ್, ಒಂದೂವರೆ ದಶಕಗಳ ಕಾಲ ಬ್ಯಾಂಕ್‌ನಲ್ಲಿ ಅವಿನಾಭವ ಸಂಬAಧ ಹೊಂದಿದ್ದ ರುದ್ರೇಗೌಡರು ರೈತರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಸಕಾಲದಲ್ಲಿ ರೈತರಿಗೆ ಸಾಲಸೌಲಭ್ಯ ಕಲ್ಪಿಸಿ ರೈತರ ಬದುಕಿನಲ್ಲಿ ಆಶಾದೀಪವಾಗಿದ್ದರು ಎಂದು ಸ್ಮರಿಸಿದರು.
ರುದ್ರೇಗೌಡರು ಬ್ಯಾಂಕ್‌ನಲ್ಲಿ ಹಾಲಿ ನಿರ್ದೇಶಕರಾಗಿದ್ದರು. ಅಲ್ಲದೇ ಎಪಿಎಂಸಿ ಸದಸ್ಯ, ಮಳಲೂರು ಗ್ರಾಪಂ ಉಪಾಧ್ಯಕ್ಷ, ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಹಾಗೂ ಟಿಎಪಿಎಂಎಸ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಕೆ.ಪಿ.ಸತೀಶ್‌ಗೌಡ, ನಿರ್ದೇಶಕರಾದ ಈಶ್ವರಹಳ್ಳಿ ಮಹೇಶ್, ರವೀಶ್, ದಾನಿಹಳ್ಳಿ ಮಂಜುನಾಥ್, ಬಸವೇಶ್, ಜಿಲ್ಲಾ ವ್ಯವಸ್ಥಾಪಕ ಪುಟ್ಟರಾಜು, ನಿವೃತ್ತ ವ್ಯವಸ್ಥಾಪಕರಾದ ಚಂದ್ರೇಗೌಡ, ಸೋಮಸುಂದರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net