

ಕಲಬುರಗಿ: ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ೫ ಸಾವಿರ ಕೋಟಿ ಹಣ ಘೋಷಣೆ ಮಾಡಿ ಕೊಟ್ಟಿದ್ದಾರಾ? ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಕೊಡದೆ ಇರೋರು ಮಟ್ಟಾಳರು. ನಮ್ಮ ರಾಜ್ಯಕ್ಕೆ ೧೪ ಮತ್ತು ೧೫ನೇ ಹಣಕಾಸಿನಲ್ಲಿ ಬರಬೇಕಾದ ಹಣ ಕೊಡದವರು ಮುಟ್ಟಾಳರು ಎಂದು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಕಿಡಿಕಾರಿದರು.
ಬಿಜೆಪಿಯವರು ಮುಟ್ಟಾಳು ಎಂದ ಎಂಬಿಪಿ ಗರಂ ಆದರು. ಭೀಮಾ ನದಿಯ ಸೀನಾ ಕಣಿವೆಯಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಪ್ರವಾಹ ಉಂಟಾಗಿದೆ. ಸೀನಾ ಜಲಾಶಯದ ಸಾಮಥ್ರ್ಯ ಕಡಿಮೆಯಿದೆ. ಹೀಗಾಗಿ ಭೀಮಾ ನದಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಬಿಡುತ್ತಿದ್ದಾರೆ. ಹೀಗಾಗಿ ನಮ್ಮಲ್ಲಿ ಪ್ರವಾಹ ಉಂಟಾಗಿದೆ. ಬಹಳಷ್ಟು ಹಳ್ಳಿಗಳು ಮುಳುಗಡೆಯಾಗಿವೆ. ವಿಜಯಪುರ ಜಿಲ್ಲೆಯಲ್ಲಿ 1.5 ಲಕ್ಷ ಬೆಳೆ ಹಾನಿಯಾಗಿದೆ
ಜಮೀನಿನಲ್ಲಿ ನೀರು ನಿಂತುಕೊಂಡಿರೋದ್ರಿಂದ
ಹಿಂಗಾರು ಬಿತ್ತನೆ ಕೂಡಾ ಆಗೋದಿಲ್ಲ
ಇಡೀ ರಾಜ್ಯದಲ್ಲಿ ಈ ಭಾರಿ ಅತೀ ಹೆಚ್ಚು ಮಳೆ ವಿಜಯಪುರದಲ್ಲಿ ಆಗಿದೆ. ಈ ರೀತಿ ಆಗದ ರೀತಿಯಾಗದಂತೆ ತಡಯಬೇಕು. ಸಮಗ್ರವಾಗಿ ಚಿಂತನ ಮಾಡಬೇಕಿದೆ. ಸಿಎಂ ಜೊತೆಗೆ ಈ ಭಾಗದ ಸಚಿವರು ಚೆರ್ಚೆ ಮಾಡ್ತೆವೆ. ಪರಿಹಾರದ ಬಗ್ಗೆ ಚರ್ಚೆ ಮಾಡ್ತೆಗೆ..
ಎಲ್ಲದಕ್ಕಿಂತ ಹೆಚ್ಚಾಗಿ ಕೇಂದ್ರ ಕೂಡಾ ಪರಿಹಾರ ನೀಡಬೇಕು. ಎನ್ ಡಿಆರ್ ಎಫ್ ನಿಯಮದ ಬಗ್ಗೆ ಗೊಂದಲ ಇದೆ ಎಂದು ಕಿಡಿಕಾರಿದರು.