ಮಯೂರೋತ್ಸವ ನೃತ್ಯ ಹಬ್ಬ

IMG_20231222_111800_902.jpg
Published on

ಹುಬ್ಬಳ್ಳಿ: ಇಲ್ಲಿಯ ಮಯೂರ ನೃತ್ಯ ಅಕಾಡೆಮಿ ವತಿಯಿಂದ ಮಯೂರೋತ್ಸವ ನೃತ್ಯ ಹಬ್ಬವನ್ನು ಡಿ. 25ರಂದು ಸಂಜೆ 4ಕ್ಕೆ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಏರ್ಪಡಿಸಲಾಗಿದೆ ಎಂದು ವಿದುಷಿ ಹೇಮಾ ವಾಘಮೋಡೆ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸ್ತ್ರೀಯ ಕಲೆಯನ್ನು ಇನ್ನಷ್ಟು ಶ್ರೀಮಂತಗೊಳಿಸುವ ಹಾಗೂ ಉನ್ನತ ಸಂಸ್ಕಾರ, ಸಂಸತಿಯುಳ್ಳ ಕಲೆಯಲ್ಲಿ ತೊಡಗಿಸಿಕೊಂಡ ಮಕ್ಕಳಿಗಾಗಿ ನೃತ್ಯಕಲಾ ವೇದಿಕೆಯನ್ನು ಕಲ್ಪಿಸಿ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಆಕಾಶ ವಾಯು ಅಗ್ನಿ ಜಲ ಭೂಮಿ ಎಂಬ ಪಂಚಮಹಾಭೂತಗಳಿಗೆ ಅಧಿಪತಿ ಶಿವನ ವರ್ಣನೆಯಿಂದ ಕೂಡಿದ ಪಂಚ ಮಹಾಭೂತ ಎಂಬ ಮಹಾನ್ ನೃತ್ಯ ನಾಟಕದ ವಿಶೇಷ ಪ್ರಸ್ತುತಿಯು ಉತ್ಸವದಲ್ಲಿದೆ. ನೃತ್ಯ ಸಂಯೋಜನೆ ಹೇಮಾ ವಾಘಮೋಡೆ, ಸಂಗೀತ ಸಂಯೋಜನೆ ಬಾಲಸುಬ್ರಹ್ಮಣ್ಯ ಶರ್ಮಾ ಹಾಗೂ ದಿವಾಕರ ಹೆಗಡೆ ಅವರು ಸಾಹಿತ್ಯ ಬರೆದಿದ್ದಾರೆ.

400 ಮಕ್ಕಳು ದೇವರನಾಮ, ಕೃತಿ, ಕೌತ್ವಂ ಮುಂತಾದ ಭರತನಾಟ್ಯ ಪ್ರದರ್ಶನವನ್ನು ನೀಡುವರು. ಬೆಂಗಳೂರಿನ ನೃತ್ಯ ಇತಿಹಾಸ ತಜ್ಞ ಡಾ. ಕರುಣಾ ವಿಜಯೇಂದ್ರ ಅವರನ್ನು ಮಯೂರ ಸನ್ಮಾನ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ಸಂಜೆ 6ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ವೀಣಾ ಬರದ್ವಾಡ, ಉದ್ಯಮಿ ಅನಂತ ಪದ್ಮನಾಭ ಐತಾಳ ಅತಿಥಿಗಳಾಗಿ ಪಾಲ್ಗೊಳ್ಳುವರು. ಭರತನಾಟ್ಯ ವಿದ್ವತ್ ಪೂರ್ಣ ಪರೀಕ್ಷೆ ಪೂರ್ಣಗೊಳಿಸಿದ ಎಂಟು ವಿದ್ಯಾಥಿರ್ಗಳನ್ನು ಸನ್ಮಾನಿಸಲಾಗುವುದು ಎಂದರು.

ಅಕಾಡೆಮಿ ಕಾರ್ಯದರ್ಶಿ ದಿನೇಶ ವಾಘಮೋಡೆ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net