

ಹುಬ್ಬಳ್ಳಿ: ಇಲ್ಲಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಬುಧವಾರ ಮಯೂರ ನೃತ್ಯ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ಮಯೂರ ಡ್ಯಾನ್ಸ್ ಫೆಸ್ಟಿವಲ್ ನಲ್ಲಿ ಅಕಾಡೆಮಿ ವಿದ್ಯಾರ್ಥಿಗಳು ನೃತ್ಯ ಪ್ರಸ್ತುತ ಪಡಿಸಿದರು.
ವಿವಿಧ ನೃತ್ಯ ಪ್ರಕಾರಗಳು ವೀಕ್ಷಕರ ಮನ ಸೆಳೆದವು.
ಮಯೂರ ನೃತ್ಯ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ಮಯೂರ ಡ್ಯಾನ್ಸ್ ಫೆಸ್ಟಿವಲ್ ಅನ್ನು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿದರು.
ರಾಜಣ್ಣ ಕೊರವಿ, ಡಾ. ಎಂ.ಆರ್. ಪಾಟೀಲ, ಡಾ. ಶಶಿಧರ ನರೇಂದ್ರ, ವಿದುಷಿ ಹೇಮಾ ವಾಮೋಡೆ, ದಿನೇಶ ವಾಮೋಡೆ ಪಾಲ್ಗೊಂಡಿದ್ದರು.