ಸಾಹಿತ್ಯ ಚಟುವಟಿಕೆಗೆ ಕಟ್ಟಡ,ಮೇಯರ್ ಬರದ್ವಾಡ ಭರವಸೆ

IMG-20230712-WA0009-1.jpg
Published on

ಹುಬ್ಬಳ್ಳಿ: ನಗರದಲ್ಲಿ ಸಾಹಿತ್ಯಕ ಚಟುವಟಿಕೆ ಬೆಳೆಸಲು ಅಗತ್ಯ ಸಹಕಾರ ನೀಡಲಾಗುವುದು, ಇದಕ್ಕಾಗಿ ಕಟ್ಟಡ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಮೇಯರ್ ವೀಣಾ ಬರದ್ವಾಡ ಭರವಸೆ ನೀಡಿದ್ದಾರೆ.w

ನಗರದ ಮೇಯರ್ ಕಚೇರಿಯಲ್ಲಿ ಧಾರವಾಡ ಜಿಲ್ಲಾ ಹಾಗೂ ಹುಬ್ಬಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬುಧವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ಗೆ ಸ್ವಂತ ಕಟ್ಟಡ ಇಲ್ಲದೇ ಸಾಹಿತ್ಯಿಕ ಕಾರ್ಯಕ್ರಮ ಮಾಡಲು ತೊಂದರೆಯಾಗುತ್ತಿದೆ. ಪಾಲಿಕೆಯ ಯಾವುದಾದರೂ ಒಂದು ತಾತ್ಕಾಲಿಕ ಕೊಠಡಿ ನೀಡುವಂತೆ ಪರಿಷತ್ ಸದಸ್ಯರು ಮನವಿ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಮೇಯರ್, ಪಾಲಿಕೆಯ ಕಟ್ಟಡಗಳನ್ನು ಪರಿಶೀಲನೆ ಮಾಡಿ ಸ್ಥಳ ಅಥವಾ ಕಟ್ಟಡ ಒದಗಿಸುವುದಾಗಿ ಹೇಳಿದರು.

ಉಪಮೇಯರ್ ಸತೀಶ ಹಾನಗಲ್ಲ, ಪ್ರೊ. ಕೆ.ಎಸ್. ಕೌಜಲಗಿ, ಪ್ರೊ. ಕೆ.ಎಸ್. ಆದಪ್ಪನವರ, ಚನ್ನಬಸಪ್ಪ ಧಾರವಾಡಶೆಟ್ರ, ವೆಂಕಟೇಶ ಮರೇಗುದ್ದಿ, ಉದಯಚಂದ ದಿಂಡವಾರ, ವಿರೂಪಾಕ್ಷ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net