ಬೆಳಗಾವಿ ಮೊದಲ ಪ್ರಜೆಗೆ ಅಗೌರವ!

IMG-20231127-WA0002.jpg
Published on


-ಪೊಲೀಸ ಕಚೇರಿಯಲ್ಲಿ ನೆಲದ‌ ಮೇಲೆ ಕುಳಿತ ಮೇಯರ್
ಬೆಳಗಾವಿ: ಪಾಲಿಕೆ ಸದಸ್ಯನ ಏಕಾಏಕಿ ಬಂಧನ ಮಾಡಿರುವುದನ್ನು ಕೇಳಲು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ನಗರದ ಪ್ರಥಮ ಪ್ರಜೆ ಆದ ಪಾಲಿಕೆ ಮೇಯರ್  ಹಾಗೂ ಉಪಮೇಯರ ಅವರನ್ನು ಪೊಲೀಸರು ಅಧಿಕಾರಿಗಳು ಒಳಗಡೆ ಬೀಡಲಿಲ್ಲ. ಇದರಿಂದಾಗಿ ‌ಮೇಯರ್, ಉಪಮೇಯರ್ ಅವರು ಪೊಲೀಸ್ ಕಚೇರಿ ಪ್ರವೇಶ ದ್ವಾರದಲ್ಲಿ ಯೇ ನೆಲದ ಮೇಲೆ ಕುಳಿತುಕೊಳ್ಳುವ ಘಟನೆ ಸೋಮವಾರ ನಡೆಯಿತು.
ನಗರ‌ ಪೊಲೀಸ್ ಅಧಿಕಾರಿಗಳಿಗೆ ಮೇಯರ್, ಉಪಮೇಯರ್ ಎಂಬುದು ಸಹ ಗೊತ್ತಿಲ್ಲ. ಸಾಮಾನ್ಯ ನಾಗರಿಕರಂತೆ ಮೇಯರ್, ಉಪಮೇಯರ್ ಅವರನ್ನು ಒಳಗಡೆ ಬೀಡದೆ ಅವಮಾನಿಸಿದ್ದಾರೆ. ಪ್ರವೇಶದ ದ್ವಾರದಲ್ಲಿ ನೆಲದ‌ ಮೇಲೆ ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಯಾರೊಂದಿಗೆ ಹೇಗೆ ವರ್ತನೆ ಮಾಡಬೇಕು ಎಂಬ ಸೌಜನ್ಯ ಕೂಡ ಪೊಲೀಸರಿಗೆ ಗೊತ್ತಿಲ್ಲ. ಈ‌ವಿಷಯ ಗೃಹ ಸಚಿವರಿಗೆ, ಪ್ರತಿಪಕ್ಷದ ನಾಯಕರ ಗಮನಕ್ಕೆ ತರುತ್ತೇವೆ ಎಂದು ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net