

ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ಮಹಾಪೌರ ಹಾಗೂ ಉಪಮಹಾಪೌರ ಆಯ್ಕೆ ಫಲಿತಾಂಶ ೂಷಣೆಗಾಗಿ ಆ. 7 ರಂದು ನಿಗದಿಪಡಿಸಿದ್ದ ಸಭೆಯನ್ನು ಆ. 11ಕ್ಕೆ ಮುಂದೂಡಲಾಗಿದೆ. ಜನೆವರಿ& ಫೆಬ್ರುವರಿಯಲ್ಲಿ ಜರುಗಿದ ವಿಜಯಪುರ ಮಹಾನಗರ ಪಾಲಿಕೆಯ 22ನೇ ಮಹಾಪೌರರ ಹಾಗೂ ಉಪ ಮಹಾಪೌರರ ಆಯ್ಕೆಯ ಚುನಾವಣೆ ಫಲಿತಾಂಶ ೂಷಣಾ ಸಭೆಯನ್ನು ಆ. 11 ರಂದು ಮಧ್ಯಾಹ್ನ 1 ಗಂಟೆಗೆ ಪಾಲಿಕೆಯ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.