

ಮಾಯಕೊಂಡ: ದಾವಣಗೆರೆ ತಾಲೂಕಿನ ಮಳಲ್ಕೆರೆ ಗ್ರಾಮದಲ್ಲಿ ಗುರುವಾರ ವಿದ್ಯುತ್ ಪರಿವರ್ತಕವನ್ನು ಪರಿಶೀಲನೆ ನಡೆಸುತ್ತಿರುವಾಗ ವಿದ್ಯುತ್ ಪ್ರವಹಿಸಿ ಸಹಾಯಕ ಮಾರ್ಗದಾಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅತ್ತಿಗೆರೆ ಗ್ರಾಮದ ವಿದ್ಯುತ್ ಶಾಖಾ ಕಚೇರಿಯ ಮುತ್ತು ಮರಡೇರಾ (32) ಮೃತ ದುರ್ದೈವಿ. ಮುತ್ತು ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನವರಾಗಿದ್ದು, ಬಾಡ ಗ್ರಾಮದಲ್ಲಿ ವಾಸವಿದ್ದರು.
ಕಂದಗಲ್ಲು, ಮಳಲ್ಕೆರೆ ಗ್ರಾಮಗಳಿಗೆ ಲೈನ್‌ಮ್ಯಾನ್ ಆಗಿದ್ದ ಅವರು ಬೆಳಗ್ಗೆ ಗ್ರಾಮದೊಳಗಿರುವ ಪರಿವರ್ತಕ (ಟಿಸಿ)ಯಲ್ಲಿ ವಿದ್ಯುತ್ ವ್ಯತ್ಯಯವಾಗಿದೆ ಎಂದು ಅದರ ಮೇಲೆ ನಿಂತು ಲೈನ್‌ಗಳನ್ನು ಪರೀಕ್ಷಿಸುವಾಗ ವಿದ್ಯುತ್ ಪ್ರವಹಿಸಿದೆ ಎಂದು ಬೆಸ್ಕಾಂ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಹದಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ದೂರು ದಾಖಲಿಸಿಕೊಂಡಿದ್ದಾರೆ.