ವೀರಭದ್ರೇಶ್ವರನ ಅದ್ದೂರಿ ರಥೋತ್ಸವ

03 myk
Published on

ಮಾಯಕೊಂಡ: ಮಾಯಕೊಂಡ ವೀರಭದ್ರೇಶ್ವರನ ಗುಗ್ಗಳ ಹಾಗೂ ರಥೋತ್ಸವ ಗ್ರಾಮದ ರಾಜಬೀದಿಗಳಲ್ಲಿ ಬುಧವಾರ ವಿಜೃಂಭಣೆಯಿಂದ ಜರುಗಿತು.

ಬುಧವಾರ ಬೆಳಗ್ಗೆ ಸಕ್ರೆಮಠ ಸ್ವಾಮಿಗಳ ಮನೆಯಿಂದ ಗುಗ್ಗಳಪಟವನ್ನು ತಲೆಯ ಮೇಲೆ ಹೊತ್ತು ಭಕ್ತಾದಿಗಳು ದೇವಸ್ಥಾನದ ಆವರಣದಿಂದ ಆಂಜನೇಯ ವೃತ್ತದ ಮಾರ್ಗವಾಗಿ ಹೊರಟರು. ಗುಗ್ಗಳದ ಹಿಂದೆ ವೀರಭದ್ರೇಶ್ವರ ಮತ್ತು ಕಾಳಿಕಾ ದೇವಿಯ ಭವ್ಯ ರಥೋತ್ಸವ ವೀರಗಾಸೆ, ವಾದ್ಯ ಮೇಳಗಳೊಂದಿಗೆ ಅದ್ದೂರಿಯಾಗಿ ಸಾಗಿತು. ಗ್ರಾಮದ ಮಹಿಳೆಯರು ಆರತಿ ಹಿಡಿದು ರಥದ ಮುಂದೆ ಸಾಗಿದರು.

ಮಧ್ಯಾಹ್ನ ದೇವಾಲಯದ ಆವರಣದಲ್ಲಿ ಕೆಂಡೋತ್ಸವ ನಡೆಯಿತು. ನಂತರ ವೀರಭದ್ರೇಶ್ವರ ಸ್ವಾಮಿ ಮತ್ತು ಕಾಳಿಕಾದೇವಿಗೆ ಕಲ್ಯಾಣೋತ್ಸವ ನೆರವೇರಿಸಲಾಯಿತು.

ಗ್ರಾಮದ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು. ಮಾಯಕೊಂಡ, ಹುಚ್ಚವನಹಳ್ಳಿ, ದೊಡ್ಡ ಮಾಗಡಿ ಸೇರಿ ಸುತ್ತ ಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net