ಅಕ್ರಮವಾಗಿ ಜಮೀನಿನ ಮರ ಕಡಿತ

crime
Published on

ಮಾಯಕೊಂಡ: ಜಮೀನಿಗೆ ವ್ಯಕ್ತಿಯೊಬ್ಬ ಅತಿಕ್ರಮವಾಗಿ ಪ್ರವೇಶಿಸಿ ಐದು ಮರಗಳನ್ನು ಕಡಿದು ಹಾಕಿದ್ದಾನೆಂದು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರೋಪಿ ದಾವಣಗೆರೆ ತಾಲೂಕು ಈಚಘಟ್ಟದ ಕರಿಬಸಪ್ಪ ವಿರುದ್ಧ ದಾವಣಗೆರೆಯಲ್ಲಿ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಾಗರಾಜ್ ಎನ್ನುವವರು ದೂರು ನೀಡಿದ್ದಾರೆ.

ಮರಗಳನ್ನು ಏಕೆ ಕಡಿದಿರಿ ಎಂದು ಪ್ರಶ್ನಿಸಿದ್ದಕ್ಕೆ, ಮರಗಳು ತಮ್ಮ ಜಮೀನಿಗೆ ಸೇರಿವೆ ಎಂದಿರುವುದಲ್ಲದೆ, ನಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net