ಶೇ. 95ಕ್ಕಿಂತ ಅಧಿಕ ಅಂಕ ಪಡೆದ್ರೆ ಬಹುಮಾನ

Mayakonda, talented, student, prize,
Published on

ಮಾಯಕೊಂಡ: ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವ್ಯಯಕ್ತಿಕವಾಗಿ 10 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಶಾಸಕ ಕೆ.ಎಸ್. ಬಸವಂತಪ್ಪ ಘೋಷಣೆ ಮಾಡಿದರು.

ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ನಂತರ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಶಿಕ್ಷಣದಲ್ಲಿ ಶೇ. 95ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಪ್ರತಿ ವಿದ್ಯಾರ್ಥಿಗೆ 10,000 ರೂ. ನಗದು ಬಹುಮಾನ ಕೊಡಲಾಗುವುದು ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆಯ ಎಲ್ಲ ಕ್ಷೇತ್ರಗಳಿಗಿಂತ ಮಾಯಕೊಂಡ ಅತ್ಯಂತ ಹಿಂದುಳಿದ ಹಾಗೂ ಅಭಿವೃದ್ಧಿ ವಂಚಿತ ಕ್ಷೇತ್ರವಾಗಿದೆ. ರಸ್ತೆ, ನೀರು ಮತ್ತಿತರ ಅನೇಕ ಸಮಸ್ಯೆಗಳು ಕಾಡುತ್ತಿವೆ. ಅಭಿವೃದ್ಧಿ ಕಾಮಗಾರಿಗಳು ಬಾಕಿ ಇವೆ ಎಂದರು.

ಶಿಕ್ಷಕ ಜಿ.ಎಂ. ನಾಗರಾಜ್ ಸ್ವಾಗತಿಸಿದರು. ಗ್ರಾಪಂ ಹಿರಿಯ ಸದಸ್ಯ ಉಳ್ಳಾಗಡ್ಡಿ ಲಕ್ಷ್ಮಣ್ ಹಾಗೂ ಸದಸ್ಯ ಮಂಜುನಾಥ್ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಲತಾ ಮಲ್ಲಿಕಾರ್ಜುನ್, ಉಪಾಧ್ಯಕ್ಷೆ ಶಿವಮ್ಮ ಮಲ್ಲಿಕಪ್ಪ, ಪ್ರಾಚಾರ್ಯ ಡಾ. ಸಿ.ಬಸವರಾಜಪ್ಪ, ಉಪ ಪ್ರಾಚಾರ್ಯ ಟಿ.ಎಸ್. ನಾಗರಾಜ್, ಉಪ ತಹಸೀಲ್ದಾರ್ ಹಾಲೇಶಪ್ಪ, ರಾಜಸ್ವ ನಿರೀಕ್ಷಕ ಹಿರೇಗೌಡ್ರು, ಸಿಪಿಐ ರಾಘವೇಂದ್ರ ಪಿಎಸ್‌ಐ ಎಸ್.ಬಿ. ಅಜಯ್, ಜಿಪಂ ಮಾಜಿ ಸದಸ್ಯ ಎಸ್. ವೆಂಕಟೇಶ್, ಮುಖಂಡ ಅಧ್ಯಕ್ಷ ಕೆಂಗ ಹನುಮಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net