ಬ್ರಿಟಿಷರ ಗುಂಡೇಟಿಗೆ ಬಗ್ಗದ ಶಾಂತಿದೂತ

Mayakonda, Gandhiji, Jayantyutsava,
Published on

ಮಾಯಕೊಂಡ: ಬ್ರಿಟಿಷರನ್ನು ಭಾರತದಿಂದ ತೊಲಗಿಸುವ ಛಲದಿಂದ ಅವರ ಗುಂಡೇಟಿಗೂ ಬಗ್ಗದೆ ಸತ್ಯ, ಶಾಂತಿ ಮತ್ತು ಅಹಿಂಸಾ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಶಾಂತಿದೂತ ಮಹಾತ್ಮ ಗಾಂಧೀಜಿ ಎಂದು ಶಿಕ್ಷಕಿ ಶ್ವೇತಾ ಉಡುಪಿ ಹೇಳಿದರು.

ಸಮೀಪದ ಗಂಗನಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರೀಜಿ ಜಯಂತ್ಯುತ್ಸವದಲ್ಲಿ ಮಾತನಾಡಿದರು.

1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿ ಶತಮಾನವಾಗಿದೆ. ಇದರ ಸ್ಮರಣಾರ್ಥ ಈ ವರ್ಷ ಗಾಂಧಿ ಜಯಂತಿ ವಿಶೇಷವಾಗಿದೆ ಎಂದರು.

ವಿದ್ಯಾರ್ಥಿಗಳು ಶಾಲಾ ಆವರಣ ಮತ್ತು ರಸ್ತೆಗಳನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು.

ಮುಖ್ಯಶಿಕ್ಷಕ ಹಾಲಸ್ವಾಮಿ, ಶಿಕ್ಷಕರಾದ ಕವಿತಾ ಎಸ್.ಸರಸ್ವತಿ, ಯು.ಶಂಕರಪ್ಪ, ಎ.ಕೆ.ಸಿದ್ದೇಶ್, ಟಿ.ಚಂದ್ರಕಾಂತ, ಬಿ.ವಸಂತಕುಮಾರ, ಎಚ್.ಎಂ. ಉಮೇಶ್ ಪಾಟೀಲ್, ಪ್ರಾಥಮಿಕ ಶಾಲಾ ಪ್ರ ಮು.ಶಿ.ಬಸಮ್ಮ ತಿಪ್ಪೇಸ್ವಾಮಿ, ಶ್ರೀದೇವಿ ಮಠದ, ಎಂ.ಎಸ್.ಅಪೂರ್ವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net