ಕಾಮಗಾರಿ ಗುಣಮಟ್ಟಕ್ಕೆ ಆದ್ಯತೆ ನೀಡಿ

Mayakonda, Double Road, Work, Worship,
Published on

ಮಾಯಕೊಂಡ: ಬಹು ದಿನಗಳ ಕನಸಾದ ದ್ವಿಪಥ ರಸ್ತೆ ಬಹಳ ದಿನಗಳ ಹಿಂದೆಯೇ ಆಗಬೇಕಿತ್ತು ಆದರೆ ಇಂದು ಸಾಕಾರಗೊಳ್ಳುತ್ತಿದೆ. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ಗ್ರಾಮದ ದ್ವಿಪಥ ರಸ್ತೆ ಕಾಮಗಾರಿ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ರೇವಣ್ಣ ಮಂತ್ರಿಯಾದಾಗ ಮಂಜೂರಾಗಿದ್ದು ಸರ್ಕಾರ ಬದಲಾವಣೆಯಿಂದ ಕಾಮಗಾರಿ ತಡವಾಯಿತು. ಯಾವುದೇ ಸಬೂಬು ಹೇಳದೇ ಕಾಮಗಾರಿ ಉತ್ತಮವಾಗಿ ಮಾಡಲು ಸೂಚಿಸಿದರು.

ಶಾಸಕ ಪ್ರೊ.ಲಿಂಗಣ್ಣ ಮಾತನಾಡಿ, ಶಾಸಕನಾಗಿ ಬಂದಾಗ ರಸ್ತೆ ಉತ್ತಮವಾಗಿಲ್ಲವೆಂದು ನೋವಾಯಿತು. ಸಂಸದರ ಸಹಕಾರದಿಂದ ಕಾಮಗಾರಿ ನಡೆಯುತ್ತಿದೆ. ಉತ್ತಮವಾಗಿ ನಿರ್ಮಾಣವಾಗಲಿ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾಮಗಾರಿಗಳನ್ನು ಮಾಡೋಣ. 8 ತಿಂಗಳಲ್ಲಿ ಕಾಮಗಾರಿ ಮುಗಿಸಲಾಗುತ್ತದೆ. ಬಿಎಸ್‌ವೈ ಸರ್ಕಾರವಿದೆ. ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ಮುಖಂಡರಾದ ಪುಟ್ಟರಂಗಸ್ವಾಮಿ, ಕೆ.ಪಿ.ಮರಿಯಾಚಾರ್, ಮಾಯಕೊಂಡ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಮುರಿಗೇಶಪ್ಪ, ಜಿಪಂ ಸದಸ್ಯ ನಟರಾಜ್, ತಾಪಂ ಸದಸ್ಯರಾದ ನಾಗರಾಜ್, ಉಮ್ಮೇಶನಾಯ್ಕ, ಮಾಜಿ ಉಪಾಧ್ಯಕ್ಷ ಸುರೇಂದ್ರಪ್ಪ, ಗ್ರಾಪಂ ಅಧ್ಯಕ್ಷೆ ರೂಪಾ ರಘುರಾಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net