ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯ

13 MYK
Published on

ಮಾಯಕೊಂಡ: ಸಮರ್ಪಕ ವಿದ್ಯುತ್ ಸರಬರಾಜಿಗೆ ಒತ್ತಾಯಿಸಿ ಮಂಗಳವಾರ ಆನಗೋಡು ಮತ್ತು ಮಾಯಕೊಂಡ ಹೋಬಳಿಯ ನೂರಾರು ರೈತರು ಮಾಯಕೊಂಡ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ಮಾಯಕೊಂಡ ಬೆಸ್ಕಾಂ ವ್ಯಾಪ್ತಿಯ ನರಗನಹಳ್ಳಿ, ಹೊನ್ನನಾಯಕನಹಳ್ಳಿ, ಓಬೇನಹಳ್ಳಿ, ಬಾವಿಹಾಳ್, ಮಾಯಕೊಂಡ, ಉಚ್ಚವನಹಳ್ಳಿ, ಎಚ್. ಬಸವಪುರ, ಹಿಂಡಿಸಕಟ್ಟೆ, ದಿಂಡನಹಳ್ಳಿ ಅಣ್ಣಾಪುರ, ಹೆದ್ನೇ ರಾಂಪುರ ದೊಡ್ಡ ಮಾಗಡಿ, ಪರಶುರಾಂಪುರಗಳ ಪಂಪ್​ಸೆಟ್ ಹಾಗೂ ನಿರಂತರ ಜ್ಯೋತಿ ಮತ್ತು ಐಪಿ ವಿದ್ಯುತ್ ಅನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಪ್ರತಿದಿನ 5-6 ಗಂಟೆ ಲೋಡ್ ಶೆಡ್ಡಿಂಗ್ ಹಾಗೂ ಲೈನ್ ಟ್ರಬಲ್ ನೆಪದಲ್ಲಿ ವಿದ್ಯುತ್ ಕಡಿತ ಮಾಡುತ್ತಾರೆ ಎಂದು ಆರೋಪಿಸಿದರು.

ಬೆಸ್ಕಾಂ ಎಇಇ ಕೆ.ಎನ್. ತೀರ್ಥೇಶ್ ಮಾತನಾಡಿ, ಮಾಯಕೊಂಡ ಬೆಸ್ಕಾಂಗೆ ಸೇರಿದ ಎಲ್ಲ ಫೀಡರ್​ಗಳು ಓವರ್ ಲೋಡ್ ಆಗಿವೆ. ಒಂದೆರಡು ದಿನಗಳಲ್ಲಿ ಸಮರ್ಪಕ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂದರು.

ಕೆಪಿಟಿಸಿಎಲ್ ಎಇಇ ಉಮೇಶ್, ಎಸ್.ಬಿ. ಅಜಯ್, ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಎಸ್.ಜಿ. ರುದ್ರೇಶ್, ನರಗನಹಳ್ಳಿ ಕೃಷ್ಣರಾಜ್, ನಶ್ವಿ ಮಂಜುನಾಥ್, ಮಾಜಿ ಸೈನಿಕ ಶಿವಣ್ಣ, ಎನ್.ಆರ್. ತಿಪ್ಪೇಸ್ವಾಮಿ, ಹೊನ್ನ ನಾಯಕನಹಳ್ಳಿ ರಾಜಣ್ಣ, ಓಬೇನಹಳ್ಳಿ ಚಂದ್ರಶೇಖರ್, ಮಾಯಕೊಂಡ ಲಕ್ಷ್ಮಣ್, ರಾಮಜೋಗಿ ಪ್ರತಾಪ್, ಹಿಂಡಿಸಕಟ್ಟೆ ಮಹಾಬಲೇಶ್, ಎಚ್.ಎಮ್ ನಾಗರಾಜ್, ಎಚ್. ಎಸ್. ಶಶಿಧರ್, ಶಿವಕುಮಾರ್, ಒಂಟಿಹಾಳ್ ಅಶೋಕ್, ಹೊನ್ನಾ ನಾಯಕನಹಳ್ಳಿ, ಬಾವಿಹಾಳ್, ಒಬೆನಹಳ್ಳಿ, ದಿಂಡದಹಳ್ಳಿ, ಪರಶುರಾಂಪುರ, ಕ್ಯಾತನಹಳ್ಳಿ, ಎಚ್. ಬಸವಪುರ, ಹೆದ್ನೇ ಎಚ್. ರಾಂಪುರ, ಇಂಡಿಸಕಟ್ಟೆ, ವಡ್ಡರಹಟ್ಟಿ ಮತ್ತು ಇನ್ನು ಹಲವು ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net