ನಿಂಗಮ್ಮನ ಮರಡಿಗೆ ಸೌಲಭ್ಯ ಕಲ್ಪಿಸಲಿ

16 DVD 04
ದೇವದುರ್ಗ ಪುರಸಭೆ ವ್ಯಾಪ್ತಿಯ ನಿಂಗಮ್ಮನ ಮರಡಿಗೆ ಮೂಲಸೌಲಭ್ಯ ಕಲ್ಪಿಸಲು ಆಗ್ರಹಿಸಿ ಪುರಸಭೆ ವ್ಯವಸ್ಥಾಪಕ ಗಂಗಾಧರ್‌ಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಮುಖಂಡರಾದ ಹನುಮಂತಪ್ಪ ಮನ್ನಾಪುರ, ಯಲ್ಲಪ್ಪ ಆಲ್ದರ್ತಿ, ವೆಂಕಟೇಶ ಸೋಮಕಾರ, ಲಕ್ಷ್ಮಣ ಮದರಕಲ್, ಕರಿಯಪ್ಪ ಇತರರಿದ್ದರು.ಬಳ್ಳಾರಿ ಬಸವರಾಜೇಶ್ವರಿ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕರ್ನಾಟಕ ಹಾಗೂ ಗೋವಾ ಜೋನಲ್ ಲೆವೆಲ್‌ನಲ್ಲಿ ಸಿಂಧನೂರಿನ ಐಕ್ಯೂ ಇಂಟರ್‌ನ್ಯಾಷನಲ್ ಸ್ಕೂಲ್‌ನ ಬಾಲಕಿಯರ ತಂಡ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.
Published on

ದೇವದುರ್ಗ: ಪುರಸಭೆ ವ್ಯಾಪ್ತಿಯ ನಿಂಗಮ್ಮನ ಮರಡಿಗೆ ಮೂಲಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಪುರಸಭೆ ವ್ಯವಸ್ಥಾಪಕ ಗಂಗಾಧರ್‌ಗೆ ದಲಿತ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ಗ್ರಾಮಸ್ಥರು ಮಂಗಳವಾರ ಮನವಿ ಸಲ್ಲಿಸಿದರು.

ನಿಂಗಮ್ಮನ ಮರಡಿಯಲ್ಲಿ 100ಕುಟುಂಬಗಳು ವಾಸಿಸುತ್ತಿದ್ದು ನೂರಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಊರಲ್ಲಿ ಅಂಗನವಾಡಿ ಕೇಂದ್ರ, ಸರಿಯಾದ ರಸ್ತೆ ಇಲ್ಲ . ಪಟ್ಟಣದಿಂದ 2-3 ಕಿಮೀ ದೂರವಿದ್ದು ಗುಡ್ಡಗಾಡುಗಳಲ್ಲಿ ಓಡಾಡುವ ಸ್ಥಿತಿಯಿದೆ.

ಗರ್ಭಿಣಿಯರು, ವಯೋವೃದ್ಧರು ಹಾಗೂ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಯಾದರೆ ತಕ್ಷಣ ಆಸ್ಪತ್ರೆಗೆ ಹೋಗಲು ಆಟೋ, ವಾಹನಗಳ ವ್ಯವಸ್ಥೆ ಇಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಶೀಘ್ರ ಸೌಲಭ್ಯ ಕಲ್ಪಿಸದಿದ್ದಲ್ಲಿ ಪುರಸಭೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದರು.

ಗ್ರಾಮಸ್ಥರಾದ ರೇಣುಕಾ ಶಿವರಾಜ, ರಂಗಮ್ಮ ಬಸವರಾಜ, ಪಾರ್ವತಿ ನಾಗರಾಜ, ರೇಣುಕಾ ಹನುಮಂತ, ಲಕ್ಷ್ಮೀ ಮೌನೇಶ, ಲಕ್ಷ್ಮೀ ಪ್ಯಾಟೆಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net