ಅಡ್ಡಿ-ಆತಂಕ ಮೆಟ್ಟಿ ನಿಲ್ಲುವ ಗಟ್ಟಿತನ ಇರಲಿ

ಗುರುಗುಂಟಾದಲ್ಲಿ ವಾಸವಿ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಟ್ಟಿಚಿನ್ನದಗಣಿ ಕಂಪನಿ ಡಿಜಿಎಂ ವಿಜಯಕುಮಾರ್ ಸಣ್ಣಕ್ಕಿ ಅವರನ್ನು ಸನ್ಮಾಸಲಾಯಿತು. ಪ್ರಮುಖರಾದ ಆರ್.ಜನಾರ್ದನ್ ಶ್ರೇಷ್ಠಿ, ಅಶೋಕ ಇಲ್ಲೂರ್, ಮಾಣಿಕ ಮಿರಿಯಾಳ್, ಆರ್.ಅಮರೇಶ, ವಾದಿರಾಜ ಸಂಪಗಾವಿ, ಎಂ.ತಿಪ್ಪಣ್ಣ ಇತರರಿದ್ದರು.

Published on

ಗುರುಗುಂಟಾ: ಸತತ ಪ್ರಯತ್ನದಿಂದ ಏನನ್ನಾದರೂ ಸಾಧಿಸಬಹುದು ಎಂದು ಹಟ್ಟಿಚಿನ್ನದಗಣಿ ಕಂಪನಿ ಡೆಪ್ಯೂಟಿ ಜನರಲ್ ಮ್ಯಾನೇಜರ್ (ಡಿಜಿಎಂ)ವಿಜಯಕುಮಾರ ಸಣ್ಣಕ್ಕಿ ಹೇಳಿದರು.

ವಾಸವಿ ಜಯಂತಿ ನಿಮಿತ್ತ ಗ್ರಾಮದಲ್ಲಿ ಆರ್ಯವೈಶ್ಯ ಸಮಾಜದಿಂದ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುರಿ ಸಾಧಿಸಬೇಕಾದರೆ ಅಡ್ಡಿ-ಆತಂಕಗಳು ಬರುವುದು ಸಹಜ. ಅದನ್ನು ಮೆಟ್ಟಿ ನಿಲ್ಲುವ ಗಟ್ಟಿತನ ಇರಬೇಕು. ಶಿಕ್ಷಣವೇ ಉಜ್ವಲ ಭವಿಷ್ಯದ ಅಡಿಪಾಯ. ಆದ್ದರಿಂದ ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ವ್ಯರ್ಥ ಜೀವನ ಸಾಗಿಸಲು ಪಾಲಕರು ಅವಕಾಶ ಮಾಡಿಕೊಡದೆ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು. ಸರ್ಕಾರಿ ಶಾಲೆಗಳ ಸದುಪಯೋಗ ಪಡೆದುಕೊಂಡು ಕುಟುಂಬಕ್ಕೆ ಆಸರೆಯಾಗಿ ದೇಶದ ಉನ್ನತಿಗೆ ಸಹಕರಿಸಿ ಎಂದರು. ಆರ್ಯವೈಶ್ಯ ಸಮಾಜದ ತಾಲೂಕು ಅಧ್ಯಕ್ಷ ಆರ್.ಜನಾರ್ದನ್ ಶ್ರೇಷ್ಠಿ, ಪ್ರಮುಖರಾದ ಅಶೋಕ ಇಲ್ಲೂರ್, ಮಾಣಿಕ ಮಿರಿಯಾಳ್, ಆರ್.ಅಮರೇಶ, ವಾದಿರಾಜ ಸಂಪಗಾವಿ, ಎಂ.ತಿಪ್ಪಣ್ಣ, ಆರ್.ಶರಣಬಸವ, ಎಸ್.ವೆಂಕಟೇಶ, ಎಂ.ಸುಜಾತಾ, ವಿಜಯಲಕ್ಷ್ಮೀ, ಕೆ.ಭಾರತಿ, ಟಿ.ಅನಿತಾ, ಆರ್.ಸುಧಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net