ದೈಹಿಕ, ಮಾನಸಿಕವಾಗಿ ಸದೃಢರಾಗಲಿ

25Ckd1
Published on

ಚಿಕ್ಕೋಡಿ: ಅಪರ ಜಿಲ್ಲಾ ಆರೋಗ್ಯ ಇಲಾಖೆಯು ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗೆ ಕಳೆದ 5 ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಗಡೇದ ಹೇಳಿದರು.

ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಚಿಕ್ಕೋಡಿಯ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹೆಲ್ತ್ ಪ್ರೀಮಿಯರ್ ಲಿಗ್-2025 ಸೀಜನ್-5ರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ದೈಹಿಕ ಚಟುವಟಿಕೆಯ ಮುಂದುವರಿದ ಭಾಗವೇ ಕ್ರೀಡೆ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಯ ಬಗ್ಗೆ ಆಸಕ್ತಿ ವಹಿಸಿ ತಮ್ಮ ಬಿಡುವಿನ ವೇಳೆಯಲ್ಲಿ ಕ್ರೀಡೆಯಲ್ಲಿ ತೊಡಗಿಕೊಂಡು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬೇಕೆಂದರು.

ಅಪರ ಜಿಲ್ಲಾ ಆರೋಗ್ಯ ಇಲಾಖೆಯ ಚಿಕ್ಕೋಡಿ ವಿಭಾಗೀಯ ಕಚೇರಿ ಅಧೀಕ್ಷಕ ನವೀನ ಗಂಗರೆಡ್ಡಿ ಮಾತನಾಡಿದರು. ಸುಮಾರು 12 ತಂಡಗಳು ಭಾಗವಹಿಸಿದ್ದವು.

ಡಾ.ವಿವೇಕ ಹೂನ್ನೊಳಿ, ಡಾ.ಶಾಂತಾರಾಮ ಬಾಗೇವಾಡಿ, ಡಾ.ಅರುಣ ಝಾಪಗೋಳ, ಡಾ.ವಿನೋದ ಘಸ್ತಿ, ಡಾ.ಸಚಿನ ಬಕರೆ, ಬಾಬಾಸಾಹೇಬ ಕುಂಬಾರ, ಜಿ.ಜಿ.ಕುಲಕರ್ಣಿ, ದಯಾನಂದ ತೇಗೂರ, ದೀಪಕ ಚಿನ್ನಾರಿ, ದೀಪಕ ಅಗ್ನಿಹೋತ್ರಿ, ಕುಮಾರಸ್ವಾಮಿ ಟಿ., ಗಿರೀಶ ಕುಲಕರ್ಣಿ, ಉತ್ತಮಸಿಂಗ ರಜಪೊತ, ಸಿದ್ದು ಹಟ್ಯಾಗೋಳ, ಜಗದೀಶ ಹುಲಕುಂದ, ಚಿದಾನಂದ ಕಲಾದಗಿಮಠ, ಮಂಜು ಚೌಗಲಾ, ಪ್ರವೀಣ ಪಾಟೀಲ, ರಾಜು ದತ್ತವಾಡೆ, ರಾಜಶೇಖರ ಹಳೆಮನಿ, ಪ್ರಕಾಶ ಮಕಾಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net