ವಿವೇಕಾನಂದರ ಆದರ್ಶ ಮೈಗೂಡಿಸಿಕೊಳ್ಳಲಿ

16CHIKODIGRAMEEN1
Published on

ಚಿಕ್ಕೊಡಿ ಗ್ರಾಮೀಣ: ಸ್ವಾಮಿ ವಿವೇಕಾನಂದರ ಆದರ್ಶ ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್‌ಹೇಳಿದರು.

ತಾಲೂಕಿನ ಯಕ್ಸಂಬಾ ಪಟ್ಟಣದ ಸ್ವಾಮಿ ವಿವೇಕಾನಂದ ಯುವ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಹಾಗೂ ವಿವೇಕ ಸೇವಾ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಿಂದು ಸಂಘಟನೆೆಗಳಿಂದ ದೇಶದಲ್ಲಿ ಹಿಂದು ಧರ್ಮ ರಕ್ಷಿಸುವ ಕಾರ್ಯವಾಗುತ್ತಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ನಿಪ್ಪಾಣಿ ಸಮಾಧಿ ಮಠದ ಪ್ರಾಣಲಿಂಗ ಸ್ವಾಮೀಜಿ ಮಾತನಾಡಿದರು. ಶ್ರೀರಾಮ ಸೇನಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಕಲ್ಯಾಣಿ ಅವರಿಗೆ ವಿವೇಕ ಸೇವಾ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗಣ್ಯರಾದ ಅಶೋಕ ಶಿರೋಳೆ, ರಾಜು ಕೆಸ್ತೆ, ಶೇಖರ ಖೋತ, ಶರದ ಮಾಳಿ, ಸೌಕಮಲ್ ಪರೀಟ್, ಡಾ.ಛಾಯಾ ಇಂಗಳೆ, ಡಾ.ಬಾಹುಬಲಿ ಮಲಿಕ್ವಾಡೆ, ಲಕ್ಷ್ಮಣ ಹಲಕಾಟೆ, ಶಿವರಾಮ ಮುಕರೆ, ಶಿವಾನಂದ ಪೂಜಾರಿ, ಸುರೇಶ ತಂಗಡೆ, ಸಂದೀಪ ಜನವಾಡ, ಜಗದೀಶ ಕುಣ್ಣೂರ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net