

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಿಂದು ಸಂಪ್ರದಾಯದ ಪ್ರಕಾರ ಯುಗಾದಿ ಹೊಸ ವರ್ಷವಾಗಿದೆ. ಬೇವು ಬೆಲ್ಲದ ಮೂಲಕ ಕಷ್ಟ ಸುಖಗಳು ಪ್ರಾಪ್ತಿಯಾಗುತ್ತವೆ. ಇಡೀ ವರ್ಷದುದ್ದಕ್ಕೂ ಪ್ರತಿಯೊಬ್ಬರ ಮನೆಯಲ್ಲಿ ಯುಗಾದಿ ಸಂಭ್ರಮ ಮನೆ ಮಾಡಲಿ ಎಂದು ಜಿಲ್ಲಾ ಸೇವಾ ಪ್ರಮುಖ ನರಸಪ್ಪ ಭಟ್ಟಂಗಿ ಹೇಳಿದರು.
ನಗರದ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಶನಿವಾರ ಏರ್ಪಡಿಸಿದ್ದ ಯುಗಾದಿ ಉತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಯುಗಾದಿಯ ಸಂತಸದ ದಿನಗಳು ವರ್ಷದುದ್ದಕ್ಕೂ ಮರುಕಳಿಸುವಂತಾಗಲಿ. ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಹೊಸದನ್ನು ರೂಢಿಸಿಕೊಳ್ಳುವ ಅವಕಾಶಗಳು ಹೆಚ್ಚಾಗಿವೆ. ಹೊಸತನ ರೂಢಿಸಿಕೊಂಡು, ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಬದಲಾವಣೆ ಪರ್ವದತ್ತ ಹೆಜ್ಜೆ ಹಾಕಬೇಕು ಎಂದರು.
ಶಾಲೆ ಉಪ ಪ್ರಾಚಾರ್ಯ ಕೃಷ್ಣ ಜೋಶಿ, ಶಿಕ್ಷಕರು, ಸಿಬ್ಬಂದಿ, ಇತರರು ಇದ್ದರು. ಸುಶಾಂತ ಇಳಕಲ್ ಸ್ವಾಗತಿಸಿದರು.